ಕುಶಾಲನಗರ, ಜ 01: ಕೂಡ್ಲೂರಿನ ಎಸ್.ಎಲ್.ಎನ್. ಕಾಫಿ ಘಟಕದ ವತಿಯಿಂದ ಕೂಡುಮಂಗಳೂರು ಗ್ರಾಮಪಂಚಾಯ್ತಿಗೆ ಹೊಸ ಟ್ರಾಕ್ಟರ್ ವಿತರಣೆ ಮಾಡಲಾಯಿತು. ಎಸ್.ಎಲ್.ಎನ್.ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವನಾಥನ್ ಹಾಗೂ ಚೇರ್ಮನ್ ಸಾತಪ್ಪನ್ ಅವರು ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಆಡಳಿತ ಮಂಡಳಿಗೆ ಟ್ರಾಕ್ಟರ್ ಹಸ್ತಾಂತರ ಮಾಡಿದರು.
ಕೂಡುಮಂಗಳೂರು ಗ್ರಾಪಂ ಗೆ ಟ್ರಾಕ್ಟರ್ ಕೊರತೆಯ ಬಗ್ಗೆ ಅಧ್ಯಕ್ಷ ಭಾಸ್ಕರ್ ನಾಯಕ್ ಅವರು ಎಸ್.ಎಲ್.ಎನ್. ಸಂಸ್ಥೆಗೆ ಸಲ್ಲಿಸಿದ ಬೇಡಿಕೆ ಮೇರೆಗೆ ಸಂಸ್ಥೆಯ ಸಿ.ಎಸ್.ಆರ್.ಫಂಡ್ ಮೂಲಕ 8.5 ಲಕ್ಷ ವೆಚ್ಚದ ಹೊಸ ಟ್ರಾಕ್ಟರ್ ಖರೀದಿಸಿ ಪಂಚಾಯಿತಿಗೆ ಕೊಡುಗೆ ನೀಡಲಾಯಿತು.
ಇದೇ ಸಂದರ್ಭ ವಿಶೇಷ ಚೇತನರಾದ ಮಾದಾಪಟ್ಟಣದ ನಟರಾಜ್ ಮತ್ತು ನೆಲ್ಲಿಹುದಿಕೇರಿಯ ಸುರೇಶ್ ಅವರಿಗೆ ಎರಡು ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್,
ನಮ್ಮ ಗ್ರಾಮಕ್ಕೆ ಎಸ್ಎಲ್ಎನ್ ಕಾಮಧೇನು ಇದ್ದಂತೆ. ಗ್ರಾಮಕ್ಕೆ ಹಲವು ಕೊಡುಗೆಗಳನ್ನು ನೀಡಿ ಗ್ರಾಮದ ಅಭಿವೃದ್ಧಿಗೆ ಸದಾ ಸಹಕಾರ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಜೀವಜಲ ಸ್ವಚ್ಚತೆಗೆ, ಪರಿಸರ ಪೂರಕ ಯೋಜನೆಗಳಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಗ್ರಾಮಸ್ಥರ ಕೋರಿಕೆ ಮೇರೆಗೆ
ಸಂಸ್ಥೆಯ ಮೂಲಕ ಹತ್ತು ಹಲವು ಯೋಜನೆಗಳಿಗೆ ಸಹಕಾರ ನೀಡುತ್ತಾ ಬರಲಾಗುತ್ತಿದೆ. ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಿದರೆ ಹೆಚ್ಚಿನ ಮಟ್ಟದಲ್ಲಿ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಎಸ್.ಎಲ್.ಎನ್. ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವನಾಥನ್ ತಿಳಿಸಿದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಪಂ ಸದಸ್ಯರಾದ ಭೋಗಪ್ಪ, ಕೆ.ಬಿ.ಶಂಶುದ್ದಿನ್, ಮಣಿಕಂಠ, ಫಿಲೋಮಿನಾ, ಮಂಜು, ಖತೀಜಾ, ಪಾರ್ವತಮ್ಮ, ಗೌರಮ್ಮ, ಪಿಡಿಒ ಸಂತೋಷ್, ಎಸ್.ಎಲ್.ಎನ್.ನ.ಸಿಒಒ ವೇಲಾಯುಧನ್, ಹೆಚ್.ಆರ್ ಆದ ಮೋಹನ್ ದಾಸ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
Back to top button
error: Content is protected !!