ಮಡಿಕೇರಿ, ಡಿ 14: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಗು ಜಿಲ್ಲಾಮಟ್ಟದ ಪತ್ರಕರ್ತರ ವಾಲಿಬಾಲ್ ಪಂದ್ಯಾವಳಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಿತು. 6 ತಂಡಗಳು ಪಾಲ್ಗೊಂಡಿದ್ದವು.
ಇಸ್ಮಾಯಿಲ್ ಕಂಡಕೆರೆ ನಾಯಕತ್ವದ ಟೀಂ ಸ್ಮಾಶರ್ಸ್ ಪ್ರಥಮ, ಪ್ರೇಮ್ ನಾಯಕತ್ವದ ಟೀಂ ಚೀತಾ ದ್ವಿತೀಯ, ಅಕ್ಷಯ್ ಗೌಡ ನಾಯಕತ್ವದ ಫ್ಲೈಯರ್ಸ್ ತಂಡ ತೃತೀಯ ಸ್ಥಾನ ಪಡೆಯಿತು. ಚೈತನ್ಯ ಅತ್ಯುತ್ತಮ ಮಹಿಳಾ ಆಟಗಾರ್ತಿ, ಬೆಸ್ಟ್ ಪ್ಲೇಯರ್ ಅವಾರ್ಡ್ ಇಸ್ಮಾಯಿಲ್ ಪಡೆದರು.