ಕುಶಾಲನಗರ, ಡಿ 13: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಗ್ರಾಮದ ಆಟದ ಮೈದಾನದಲ್ಲಿ ಕಾಂಕ್ರೀಟ್ ಚೇರ್ ಗಳು ಅಳವಡಿಕೆ ಮಾಡಲಾಗುತ್ತಿದ್ದು ಈ ಕುರಿತು ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಹಾರಂಗಿ ಆಟದ ಮೈದಾನದಲ್ಲಿ ಮಕ್ಕಳು ಆಟವಾಡಲು ಮತ್ತು ವೃದ್ದರು ವಾಯುವಿಹಾರಕ್ಕಾಗಿ ಪಾರ್ಕ್ ಒಂದನ್ನು ದಾನಿಗಳ ಮುಖಾಂತರ ನಿರ್ಮಾಣ ಮಾಡಲು ತೀರ್ಮಾನಿಸಿದ್ದು ಅದರಂತೆ ದಾನಿಗಳಾದ ಡಿ ಕೆ ಸುಗುರಾಜು , ರಾಜೇಶ್ ಇಂಟರ್ ಲಕ್ ಹಾಗೂ ಬಾಲಕೃಷ್ಣ ನಾಯ್ಡು ರವರುಗಳ ಬಳಿ ಕೇಳಿಕೊಂಡಾಗ ತಕ್ಷಣ ಸ್ಪಂದಿಸಿ ನಮಗೆ 8 ಕಾಂಕ್ರೀಟ್ ಚೇರುಗಳನ್ನು ವಿತರಣೆ ಮಾಡಿರುತ್ತಾರೆ ಅವರುಗಳಿಗೆ ಸರ್ವ ಗ್ರಾಮಸ್ಥರ ಪರವಾಗಿ ಧನ್ಯವಾದಗಳು ತಿಳಿಸುತ್ತಾ ಹಳ್ಳಿಗಳ ಅಭಿವೃದ್ಧಿಗೆ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಆಗ ಮಾತ್ರ ಹಳ್ಳಿಗಳು ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು.
Back to top button
error: Content is protected !!