ಮಡಿಕೇರಿ ನ.15:-2024-25 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಪ್ರೌಢ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರುಗಳಿಗೆ ನವೆಂವರ್ 17 ರಿಂದ 26 ರವರೆಗೆ ಮೈಸೂರು ವಿಭಾಗ ಮಟ್ಟದ ವಿಭಾಗದೊಳಗಿನ ಅಂತರ್ ಜಿಲ್ಲಾ ಕೋರಿಕೆ/ ಪರಸ್ಪರ ವರ್ಗಾವಣೆಯ ಆನ್‍ಲೈನ್ ಕೌನ್ಸಿಲಿಂಗ್ (ರೌಂಡ್ ರಾಬಿನ್) ಮಾದರಿಯಲ್ಲಿ ಸ್ಥಳ ನಿಯುಕ್ತಿಗೊಳಿಸಬೇಕಿರುತ್ತದೆ.
ಅದರಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಮೈಸೂರು ವಿಭಾಗದೊಳಗಿನ ಅಂತರ್ ಜಿಲ್ಲಾ ಕೋರಿಕೆ/ ಪರಸ್ಪರ ವರ್ಗಾವಣೆಯ ಕೌನ್ಸೆಲಿಂಗ್ ಮಾದರಿಯಲ್ಲಿ ನವೆಂಬರ್, 17 ರಿಂದ 26 ರವರೆಗೆ ನಗರದ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ.
ವೇಳಾಪಟ್ಟಿ ಅನುಸಾರ ಸಂಬಂಧಿಸಿದ ಶಿಕ್ಷಕರು ನಿಗಧಿತ ದಿನಾಂಕದಂದು ಕೌನ್ಸೆಲಿಂಗ್‍ಗೆ ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳೊಂದಿಗೆ ತಪ್ಪದೇ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು: ಕೋರಿಕೆ ವರ್ಗಾವಣೆಯು ನವೆಂಬರ್ 17 ರಂದು ನಡೆಯಲಿದ್ದು, ವಿಶೇಷ ಶಿಕ್ಷಕರು ಆದ್ಯತಾ ಕ್ರಮ ಸಂಖ್ಯೆ 01 ರಿಂದ 03, ದೈಹಿಕ ಶಿಕ್ಷಣ ಶಿಕ್ಷಕರು 01 ರಿಂದ 09, ಮುಖ್ಯ ಶಿಕ್ಷಕರು 01 ರಿಂದ 20, ಸಹ ಶಿಕ್ಷಕರು 01-ರಿಂದ 100, ನವೆಂಬರ್, 18 ರಂದು ಸಹ ಶಿಕ್ಷಕರು 101 ರಿಂದ 259, ನವೆಂಬರ್ 19 ರಂದು ಸಹ ಶಿಕ್ಷಕರು 260 ರಿಂದ 409, ನವೆಂಬರ್, 26 ರಂದು ಪರಸ್ಪರ ವರ್ಗಾವಣೆ ಸಹ ಶಿಕ್ಷಕರು 01 ರಿಂದ 03.
ಪ್ರೌಢ ಶಾಲಾ ವಿಭಾಗ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರ ಕೋರಿಕೆ ವರ್ಗಾವಣೆಯು ನವೆಂಬರ್, 20 ರಂದು ನಡೆಯಲಿದೆ. ವಿಶೇಷ ಶಿಕ್ಷಕರು 01-ರಿಂದ 09, ದೈಹಿಕ ಶಿಕ್ಷಣ ಶಿಕ್ಷಕರು 01 ರಿಂದ 30, ಸಹ ಶಿಕ್ಷಕರು 01 ರಿಂದ 150, ನವೆಂಬರ್ 21, ರಂದು ಸಹ ಶಿಕ್ಷಕರು 151 ರಿಂದ 432, ಪರಸ್ಪರ ವರ್ಗಾವಣೆಯು ನವೆಂಬರ್ 26 ರಂದು ನಡೆಯಲಿದ್ದು, ಸಹ ಶಿಕ್ಷಕರು 01 ರಿಂದ 08 ಆದ್ಯತಾ ಕ್ರಮ ಸಂಖ್ಯೆಯಾಗಿರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು ಅವರು ತಿಳಿಸಿದ್ದಾರೆ.
Back to top button
error: Content is protected !!