ಕುಶಾಲನಗರ, ಅ 29:387ನೇ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಸಾಲಿನ ಚುನಾವಣೆ ಅ.31 ರಂದು ನಡೆಯಲಿದ್ದು ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಂದ ಮತಯಾಚನೆ ಭರದಿಂದ ಸಾಗಿದೆ.
ಕುಶಾಲನಗರ (ನಂಜರಾಯಪಟ್ಟಣ) ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷ ಬಿ.ಸಿ.ಮಲ್ಲಿಕಾರ್ಜುನ ಸೇರಿದಂತೆ ಅವರ ತಂಡದವರಾದ
ಮಹಿಳಾ ಮೀಸಲು ಕ್ಷೇತ್ರದಿಂದ ಎಸ್.ಆರ್.ಅನುಪಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹೆಚ್.ಜೆ.ಗಣೇಶ್ ಮತ್ತು ಬೆಂಬಲಿಗರು ಮತಯಾಚನೆಯಲ್ಲಿ ತೊಡಗಿದ್ದಾರೆ.
ಈ ಮೂವರು ಅಭ್ಯರ್ಥಿಗಳ ಆಟೋ ರಿಕ್ಷಾ ಚಿನ್ಹೆಗೆ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕುಶಾಲನಗರ ಕ್ಷೇತ್ರ ವ್ಯಾಪ್ತಿಯ ಗುಡ್ಡೆಹೊಸೂರು, ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು, ಕುಶಾಲನಗರ ಪುರಸಭೆ, ನೆಲ್ಲಿಹುದಿಕೇರಿ ಗ್ರಾಪಂ ವ್ಯಾಪ್ತಿಯ ಉಪಗ್ರಾಮಗಳಲ್ಲಿರುವ 456 ಮತದಾರರ ಸದಸ್ಯರುಗಳು ತಮ್ಮ ಅತ್ಯಮೂಲ್ಯ ಮತ ನೀಡಿ ವಿಜಯಶಾಲಿಗಳಾಗಿಸಲು ಬಿ.ಸಿ.ಮಲ್ಲಿಕಾರ್ಜುನ ಅವರು ಕೋರಿದ್ದಾರೆ.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಬಿ.ಎಸ್.ಚಂದ್ರಶೇಖರ್ ಸೇರಿದಂತೆ ಸ್ಥಳೀಯರಾದ ಪರ್ಲಕೋಟಿ ನಂದ, ತಂಟೆಪಾಡಿ ರಾಜೇಶ್, ಪರ್ಲಕೋಟಿ ಜಯಪ್ರಕಾಶ್ (ವಿಜು) ಮತ್ತಿತರರು ಮತಯಾಚನೆ ಸಂದರ್ಭ ಇದ್ದರು.
Back to top button
error: Content is protected !!