ಕುಶಾಲನಗರ, ಅ 17: 7ನೇ ಹೊಸಕೋಟೆ ಗ್ರಾಪಂ ವ್ಯಾಪ್ತಿಯ ತೊಂಡೂರಿನಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ ಜಿಂಕೆಯನ್ನು ಬಲಿಪಡೆದ ಘಟನೆ ನಡೆದಿದೆ.
ಅಂದಾಜು 20 ವರ್ಷ ಪ್ರಾಯದ ಗಂಡು ಜಿಂಕೆಯನ್ನು ಐದಾರು ನಾಯಿಗಳು ಅಟ್ಟಾಡಿಸಿ ಕೊಂದು ಹಿಂಭಾಗ ಮಾಂಸ ಭಕ್ಷಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರ ಅವರು, ಘಟನೆಗೆ ಸಂತಾಪ ವ್ಯಕ್ತಪಡಿಸಿ, ವನ್ಯಜೀವಿಗಳ ಜೀವಹಾನಿ ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ ಎಂದು ಒತ್ತಾಯಿಸಿದರು.
ಡಿಆರ್ಎಫ್ ಒ ದೇವಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಸ್ಥಳೀಯ ಉದ್ಯಮಿ ಬಿ.ಕೆ.ದರ್ಶನ್ ಇದ್ದರು.
Back to top button
error: Content is protected !!