ಕುಶಾಲನಗರ. ಅ. 15: ಜಿಲ್ಲೆಯ ಕನ್ನಡ ಸಿರಿ ಬಳಗದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಸಾಹಿತಿಗಳನ್ನು ಪರಿಗಣಸುವಂತೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ನವರಿಗೆ ಮನವಿಯನ್ನು ಕುಶಾಲನಗರದಲ್ಲಿ ಬಳಗದ ವತಿಯಿಂದ ನೀಡಲಾಯಿತು.
ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ 1966ರಲ್ಲಿ ಪ್ರಾರಂಭಗೊಂಡು ಇಂದಿಗೆ 59. ವರಗಷಗಳು ಕಳೆದರೂ ಕೊಡಗಿನಲ್ಲಿ ವಾಸವಿರುವ ನೈಜ ಸಾಹಿತಗಳು ರಾಜ್ಯೋತ್ಸವ ಪ್ರಶಸ್ತಿಯಿಂದ ವಂಚಿತರಾಗುತ್ತಲೇ ಬಂದಿದ್ದಾರೆ
ಕೊಡಗಿನಲ್ಲೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ತನ್ನ ಬರವಣಿಗೆಯ ಶೈಲಿಯ ಮುಖಾಂತರ ಅನುವಾದ ಸಾಹಿತ್ಯದಲ್ಲೂ ಕನ್ನಡಕ್ಕೆ ಬ್ರೂಕರ್ ಪ್ರಶಸ್ತಿ ತಂದು ಕೊಟ್ಟವರೂ ಸಹಾ ಕೊಡಗಿನವರೇ ಎಂಬುದು ನಮ್ಮ ಹೆಮ್ಮೆ,
ಆದರೂ ರಾಜ್ಯೋತ್ಸವ ಪುರಸ್ಕೃತ ಪ್ರಧಾನ ಸಂದರ್ಭದಲ್ಲಿ ಇದುವರೆಗೂ ಸೂಕ್ತ ಸ್ಧಾನ ಮಾನ ಕೊಡಗಿಗೆ ದೊರೆತಿರುವುದಿಲ್ಲಾ.
ಕೊಡಗಿನ ಅನೇಕ ಸಾಹಿತಿಗಳು ಕಥೆ,ಕಾದಂಬರಿಗಳು ಚಲನಚಿತ್ರ ಗೊಂಡು ರಾಜ್ಯ, ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. 80. ಮತ್ತು90. ರ ಆರೆಯದ ಕೊಡಗಿನ ನೈಜ ಸಾಧಕ ಸಾಹಿತಿಗಳಿದ್ದಾರೆ. ಈ ಬಾರಿಯಾದರೂ ಕೊಡಗಿನ ನೈಜ ಸಾಹಿತಿಗಳಿಗೆ ರಾಜ್ಯೋತ್ಸವ ಪುರಸ್ಕಾರದಲ್ಲಿ ಅವಕಾಶ ನೀಡಬೇಕೆಂದು ಕನ್ನಡ ಸಿರಿ ಸ್ನೇಹ ಬಳಗದ ವತಿಯ ಅಧ್ಯಕ್ಷ ಬಿ.ಎಸ್ ಲೋಕೇಶ್ ಸಾಗರ ಮುಖೇನ ಶಾಸಕ ಡಾ. ಮಂತರ್ ಗೌಡ ನವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಬಳಗದ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ, ನರೇಂದ್ರ ರಮೇಶ್ ಸೇರಿದಂತೆ ಇನ್ನೀತರರು ಇದ್ದರು.
Back to top button
error: Content is protected !!