ಕುಶಾಲನಗರ, ಆ 12: ಕುಶಾಲನಗರ ಮತ್ತು ಮುಳ್ಳುಸೋಗೆ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶುಕ್ರವಾರ ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಪೌರ ಕಾರ್ಮಿಕರೊಂದಿಗೆ ರಕ್ಷಾಬಂಧನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಪೌರ ಕಾರ್ಮಿಕರಿಗೂ ಮಹಿಳಾ ಮೋರ್ಚಾದ ವತಿಯಿಂದ ರಾಖಿ ಕಟ್ಟಿ ಸಿಹಿ ತಿಂಡಿ ವಿತರಿಸಿ ಸ್ವಾತಂತ್ರ ಅಮೃತಮಹೋತ್ಸವದ ಆಂಗವಾಗಿ ಎಲ್ಲಾ ಪೌರಕಾರ್ಮಿಕರಿಗೂ ರಾಷ್ಟ್ರದ್ವಜ ವಿತರಿಸಲಾಯಿತು.
ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಜಯವರ್ಧನ್,ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಉಮಶಂಕರ್,ಸಹಪ್ರಮುಖ್ ಶಿವಾಜಿ,ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಗೌತಮ್,ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ವೇದಾವತಿ,ಜಿಲ್ಲಾ ಕಾರ್ಯದರ್ಶಿ ಅಮೃತ್ ರಾಜ್,ವಕ್ತಾರರಾದ ಕೆ.ಜಿ.ಮನು,ಕುಶಾಲನಗರದ ಬಿಜೆಪಿ ಮಹಿಳಾ ಮೋರ್ಚದ ಪ್ರಮುಖ್ ನಿರ್ಮಲಾ,ಸಹಪ್ರಮುಖ್ ಬನಶಂಕರಿ,ಶೋಭಾಹಾಗೂ ಮುಳ್ಳುಸೋಗೆ ಶಕ್ತಿ ಕೇಂದ್ರದ ಪ್ರಮುಖ್ ಅಕ್ಕಮ್ಮ ಸೋಮಣ್ಣ ಸಹ ಪ್ರಮುಖ್ ಹರಿಣಿ,ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚದ ಸದಸ್ಯೆ ಡಾಟಿ,ನಗರ ST ಮೋರ್ಚದ ಅದ್ಯಕ್ಷರಾದ ಚಂದ್ರಶೇಖರ್ ಪಂಚಾಯತಿ ಸದಸ್ಯರಾದ ರೂಪ,ಎಂ.ವಿ.ನಾರಾಯಣ ಹಾಗೂ ಮಹಿಳಾ ಮೋರ್ಚದ ಮುಖಂಡರಾದ ಆಜೀತಾ,ಅನೀತ ಹಲವು ಪೌರ ಕಾರ್ಮಿಕರು ಉಪಸ್ಥಿತರಿದ್ದರು
Back to top button
error: Content is protected !!