ಕುಶಾಲನಗರ ಅ. 4: ಕೂಡಿಗೆ ಗ್ರಾಮ ಪಂಚಾಯಿತ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಈ ವ್ಯಾಪ್ತಿಯ ಹಲವು ರೈತರ ಬೆಳೆಗಳನ್ನು ತಿಂದು ತುಳಿದು ಬಾರಿ ದಾಂದಲೆ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಪಡಿಸಿವೆ.
ಸೀಗೆಹೊಸೂರು ಗ್ರಾಮದ ವಿರೂಪಾಕ್ಷ ಮತ್ತು ಪುರುಷೋತ್ತಮ ಎಂಬವರ ಜಮೀನಿಗೆ ಜೇನುಕಲ್ಲು ಬೆಟ್ಟದ ಕಡೆಯಿಂದ ಬಂದ ಕಾಡಾನೆಗಳು ಜಮೀನಿನಲ್ಲಿ ಬೆಳೆಸಲಾಗಿದ್ದ ಸಿಹಿ ಗೆಣಸು, ಬಾಳೆ, ಮೆಕ್ಕೆಜೋಳದ ಬೆಳೆಗಳನ್ನು ನಾಶಪಡಿಸಿವೆ. ಸ್ಧಳಕ್ಕೆ ಹೆಬ್ಬಾಲೆ ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
Back to top button
error: Content is protected !!