ಕಾಮಗಾರಿ

ನಂಜರಾಯಪಟ್ಟಣ: ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಕುಶಾಲನಗರ, ಅ 04: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮದ ಶಾರದ ರವರ ಮನೆಯ ಕಡೆಗೆ ಹಾದು ಹೋಗುವ ಕಾಂಕ್ರೀಟ್ ಕಾಲು ರಸ್ತೆ ನಿರ್ಮಾಣ ಕಾಮಗಾರಿ ಅಂದಾಜು ರೂ.1.00 ಲಕ್ಷಗಳು ಕಾಮಗಾರಿಗೆ ಚಾಲನೆ ನೀಡಲಾಯಿತು. ಸದರಿ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ ಎಲ್‌ ವಿಶ್ವ ರವರು ಮತ್ತು ಸದಸ್ಯೆ ಗಿರಿಜಮ್ಮ ಸ್ಥಳ ಪರಿಶೀಲನೆ ಮಾಡಿದರು.

ಹೊಸಪಟ್ಟಣ ಗ್ರಾಮದ ಸೀತಾರಾಮ್ ರವರ ಮನೆಯ ಕಡೆಗೆ ಹಾದು ಹೋಗುವ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಅಂದಾಜು ರೂ.50000 ಕಾಮಗಾರಿಗೆ ಚಾಲನೆ ನೀಡಲಾಯಿತು. ಸದರಿ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ ಎಲ್‌ ವಿಶ್ವ ರವರು ಮತ್ತು ಕಾರ್ಯದರ್ಶಿಗಳು ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!