ಕುಶಾಲನಗರ, ಆ 10: ಕುಶಾಲನಗರ ಪಟ್ಟಣ ಪಂಚಾಯಿತಿಯ ಗುಂಡುರಾವ್ ಬಡಾವಣೆಯಲ್ಲಿ ರಚಿಸಲಾಗಿರುವ ಐಡಿಎಸ್ಎಂಟಿ ಯೋಜನೆಯಡಿ ವಿವಿಧ ಕಾರ್ಯಸೂಚಿಗಳ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಸಭಾಂಗಣದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಐಡಿಎಸ್ಎಂಟಿ ಗೆ ಸೇರಿದ ಜಾಗದಲ್ಲಿ ತಾಲೂಕು ಆಡಳಿತ ಭವನ, ಅಂಬೇಡ್ಕರ್ ಭವನ ನಿರ್ಮಾಣ, ವಸತಿ ರಹಿತರಿಗೆ ಗುಂಪು ಮನೆ ನಿರ್ಮಾಣ ಸಂಬಂಧ, ಒಳಚರಂಡಿ ಕಾಮಗಾರಿ, ಕುಡಿವ ನೀರಿನ ಸರಬರಾಜು ಯೋಜನೆ ಆರ್ಥಿಕ ಬಿಡ್ ಘಟನ್ನೋತ್ತರ ಮಂಜೂರಾತಿ ಸೇರಿದಂತೆ ಗುಂಡುರಾವ್ ಬಡಾವಣೆಯಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ, ಸರ್ವೆನಂ 28 ರ ಜಾಗದ ದಾವೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ತಾಲೂಕು ತಹಶೀಲ್ದಾರ್ ಟಿ.ಎಂ.ಪ್ರಕಾಶ್,
ಕುಶಾಲನಗರ ಪಪಂ ಅಧ್ಯಕ್ಷ ಜೈವರ್ಧನ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸೇರಿದಂತೆ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.
Back to top button
error: Content is protected !!