ಕುಶಾಲನಗರ, ಆ 26: ಗೌರಿ ಹಬ್ಬದ ಅಂಗವಾಗಿ ಎಲ್ಲೆಡೆ ಮಹಿಳೆಯರು ಸಡಗರ – ಸಂಭ್ರಮಗಳಿಂದ ಶ್ರದ್ಧೆ ಮತ್ತು ಭಕ್ತಿ ತುಂಬಿ ಸ್ವರ್ಣಗೌರಿ ಪ್ರತಿಷ್ಠಾಪಿಸಿ ಪೂಜಿಸಿದರು.
ಮನೆಯಂಗಳದಲ್ಲಿ ಮುಂಜಾನೆ ಬೇಗ ಎದ್ದು ಮಡಿ ಯುಟ್ಟ ಮಹಿಳೆಯರು ಮನೆ ಮುಂದೆ ರಂಗೋಲಿ ಹಚ್ಚಿ ತೋರಣಗಳನ್ನು ಕಟ್ಟಿ ನೀರಿನ ಕೊಳವೆ ಬಾವಿಗಳಲ್ಲಿ ಪೂಜಿಸಿ ಸ್ವರ್ಣ ಗೌರಿಯನ್ನು ಪ್ರತಿಷ್ಟಾಪಿಸಿ ಪೂಜಿಸಿದರು.
ಕುಶಾಲನಗರದ ಚೌಡೇಶ್ವರಿ ದೇವಾಲಯದಲ್ಲಿ ದೇವಾಲಯ ಸಮಿತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಗೌರಿಯನ್ನು ಪ್ರತಿಷ್ಟಾಪಿಸಲಾಯಿತು.
ಬೆಳಗ್ಗೆ ಕಾವೇರಿ ನದಿಗೆ ತೆರಳಿದ ಮಹಿಳೆಯರು ಸಾಮೂಹಿಕವಾಗಿ ಗಂಗಾ ಪೂಜೆ ನೆರವೇರಿಸಿದರು. ಬಳಿಕ ಮೆರವಣಿಗೆ ಮೂಲಕ ದೇವಾಲಯಕ್ಕೆ ಆಗಮಿಸಿ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಪರಸ್ಪರ ಅರಿಶಿನ ಕುಂಕುಮ, ಬಳೆಗಳನ್ನು ಕೊಟ್ಟು ತೊಟ್ಟು ಸಂಪ್ರದಾಯ ಮೆರೆದರು.
ದೇವಾಲಯದ ಅರ್ಚಕ ಪ್ರಸನ್ನ ಭಟ್ ಪೂಜಾ ವಿಧಿ ನಡೆಸಿದರು.ದೇವಾಲಯ ಸಮಿತಿ ಅಧ್ಯಕ್ಷ
ಡಿ.ವಿ.ರಾಜೇಶ್
ಕಾರ್ಯದರ್ಶಿ ಕೃಷ್ಣಕುಮಾರ್,
ಜಯಂತ್ ಹಾಗೂ ಮಹಿಳಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.
Back to top button
error: Content is protected !!