ಕುಶಾಲನಗರ, ಆ 23: ಡಿಸ್ಕಸ್ ಥ್ರೋ ಅವಘಡದಲ್ಲಿ ಗಾಯಗೊಂಡಿದ್ದ ವಿರೂಪಾಕ್ಷಪುರ ಗ್ರಾಮದ ಶೇಖರ ಹಾಗೂ ಆಶಾ ಅವರ ಪುತ್ರ ಪ್ರಜ್ವಲ್ ಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು, ಇದೀಗ ಶಸ್ತ್ರಚಿಕಿತ್ಸೆ ಆಗಿದೆ ಎಂದು ಕುಟುಂಬದವರು ಮಾಹಿತಿ ನೀಡಿರುತ್ತಾರೆ. ಆದಷ್ಟು ಬೇಗ ಪ್ರಜ್ವಲ್ ಗುಣಮುಖರಾಗಿ ಬರಲಿ ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರಾರ್ಥಿಸುತ್ತಿದ್ದು, ನಂಜರಾಯಪಟ್ಟಣ
ಗ್ರಾಮ ಪಂಚಾಯಿತಿ ವತಿಯಿಂದ ಶೇಕಡ 25 ಅನುದಾನದಡಿಯಲ್ಲಿ ಪ್ರಜ್ವಲ್ ಚಿಕಿತ್ಸೆಗೆ ಸಹಾಯ ಧನವನ್ನು ನೀಡುವುದಾಗಿ ಪಂಚಾಯಿತಿ ಆಡಳಿತ ಮಂಡಳಿಯಿಂದ ನಿರ್ಣಯಿಸಲಾಗಿದೆ ಎಂದು ಸದಸ್ಯ ರಕ್ಷಿತ್ ಮಾವಜಿ ಮಾಹಿತಿ ನೀಡಿದ್ದಾರೆ.
Back to top button
error: Content is protected !!