ಕುಶಾಲನಗರ, ಆ 17: ಪೊನ್ನಂಪೇಟೆಯ ಆಟೋ ಚಾಲಕರಗಿರುವ ಚಿಣ್ಣೀರ ಹರೀಶ್ ಹಾಗೂ ಪೂರ್ಣಿಮಾ ದಂಪತಿಯ ಪುತ್ರಿ, ಸಂತ ಅಂಥೋನಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿಶಿಕ ಸಿ.ಎಚ್.ಭರತನಾಟ್ಯದಲ್ಲಿ ಅಪ್ರತಿಮ ಸಾಧನೆ ತೋರುತ್ತಿದ್ದಾರೆ.
ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದು ಅತೀ ಎಳೆಯ ವಯಸ್ಸಿನಿಂದಲೂ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ದಿಶಿಕ ಮಂತ್ರಾಲಯ, ಕಟೀಲು,ಉಡುಪಿ, ಕೇರಳದ ಕಣ್ಣೂರು,ಗುರುವಾಯೂರ, ತಮಿಳುನಾಡಿನ ವೆಲ್ಲೂರು, ದಸರಾ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು ಹೀಗೆ 80ಕ್ಕೂ ಹೆಚ್ಚು ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಾ ಬಂದಿದ್ದು ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸುವ ಪ್ರಾವೇಶಿಕ ಪೂರ್ಣ ಹಂತದ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2023 ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು ಬಾಲಭವನ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭರತನಾಟ್ಯ ವಿಭಾಗದಲ್ಲಿ ಭಾಗವಹಿಸಿ ತೃತೀಯ ಬಹುಮಾನವನ್ನು ಪಡೆದಿರುತ್ತಾಳೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಈಕೆ ಮಾಡಿರುವ ಅಪ್ರತಿಮ ಸಾಧನೆಯನ್ನು ಗುರುತಿಸಿ ಕಡಗು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಯನ್ನು, ಹತ್ತು ಸಾವಿರ ನಗದು ಬಹುಮಾನಗಳೊಂದಿಗೆ ನೀಡಿ ಗೌರವಿಸಲಾಗಿದೆ.
ಈಕೆ ಪೊನ್ನಂಪೇಟೆಯ ನಾಟ್ಯಸಂಕಲ್ಪ ನೃತ್ಯಕಲಾಶಾಲೆಯ ನೃತ್ಯ ಗುರುಗಳಾದ
ಕು. ಪ್ರೇಕ್ಷ ಭಟ್ ರವರ ಬಳಿ ಕಳೆದ 8 ವರ್ಷಗಳಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ.
Back to top button
error: Content is protected !!