ಶಿಕ್ಷಣ

ಪಾಲಿಬೆಟ್ಟದ ಜಿ ಎಂ ಪಿ ಶಾಲೆಯಲ್ಲಿ ಸ್ನೇಹ ಸಮ್ಮಿಲನ, ಗುರುವಂದನೆ ಕಾರ್ಯಕ್ರಮ

ಕುಶಾಲನಗರ, ಆ 156: ಪಾಲಿಬೆಟ್ಟದ ಜಿ ಎಂ ಪಿ ಶಾಲೆಗೆ ಹಳೆ ವಿದ್ಯಾರ್ಥಿಗಳು ಕಬ್ಬಿಣದ ಗೇಟನ್ನು ಅಳವಡಿಸುವ ಮೂಲಕ ಕಲಿತ ಶಾಲೆಯ ಸೇವೆಗೆ ಮುಂದಾಗಿದ್ದಾರೆ.

1996 ರಲ್ಲಿ ಪಾಲಿಬೆಟ್ಟದ ಜಿಎಂಪಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಸೇರಿಸಿ ವಾಟ್ಸ್ ಆಪ್ ಗ್ರೂಪ್ ಪ್ರಾರಂಭಿಸಿ ತಾವು ಕಲಿತ ಶಾಲೆಗೆ ತಮ್ಮಿಂದಾಗುವ ಕೊಡುಗೆ ನೀಡುವ ಕುರಿತು ತೀರ್ಮಾನ ಕೈಗೊಂಡಿದ್ದರು.ಈ ಹಿನ್ನೆಲೆಯಲ್ಲಿ ಶಾಲೆಗೆ ಗೇಟ್ ಇಲ್ಲದೆ ಇರುವುದನ್ನು ಅರಿತ ಹಳೆವಿದ್ಯಾರ್ಥಿಗಳು ಸೇರಿ ಹಣ ಸಂಗ್ರಹಿಸಿ ಸುಸಜ್ಜಿತ ಕಬ್ಬಿಣದ ಗೇಟ್ ಅಳವಡಿಸುವ ಮೂಲಕ ಕಲಿತ ಶಾಲೆಗೆ ಕೊಡುಗೆಯನ್ನು ನೀಡಿದ್ದಾರೆ. 1996 ನೇಸಾಲಿನ ತಮ್ಮ ಸಹಪಾಠಿಗಳನ್ನು ಒಂದು ಗೂಡಿಸುವ ಸಲುವಾಗಿ ಸ್ನೇಹಮಿಲನ ಕೂಟವನ್ನು ಆಯೋಜಿಸಿದರು.ಇದೇ ಸಂಧರ್ಭದಲ್ಲಿ ತಾವು ಕೊಡುಗೆಯಾಗಿ ನೀಡಿದ ಗೇಟ್ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕಿ ಪಡುವಂಡ ದಮಯಂತಿ ನಿರ್ವಹಿಸಿದರು.
ಈ ಸಂಧರ್ಭದಲ್ಲಿ ಪಾಲಿಬೆಟ್ಟ ಜಿ ಎಂ ಪಿ ಶಾಲೆಯ ಮುಖ್ಯ ಶಿಕ್ಷಕಿ‌ ಸೋಫಿಯ ಮಾತನಾಡಿ ತಾವು ಕಲಿತ ಶಾಲೆಯನ್ನು ಮರೆಯದೆ ವಿದ್ಯೆ ಕಲಿತ ಶಾಲೆಗೆ‌ ತಮ್ಮಿಂದಾಗುವ ಕೊಡುಗೆಯನ್ನು ನೀಡುವ ಗುಣವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದ ಶಿಕ್ಷಕರು ಧನ್ಯರು.ಈ ಗುಣವನ್ನು ಎಲ್ಲಾ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ನಿವೃತ್ತ ಶಿಕ್ಷಕಿ ಪಡುವಂಡ ದಮಯಂತಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಸಹಪಾಠಿ ನರಸಿಂಹ ರಾಜು ರವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂಧರ್ಭದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕರುಂಬಯ್ಯ,ಎಸ್ ಡಿ ಎಂ ಸಿ ಅಧ್ಯಕ್ಷರು,ಸಹಶಿಕ್ಷಕರುಹಾಗೂ ಹಳೆ ವಿದ್ಯಾರ್ಥಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!