ಸನ್ಮಾನ

ರಾಜ್ಯಕ್ಕೆ ದ್ವಿತೀಯ ಸ್ಥಾನ‌ ಗಳಿಸಿದ ಕುಶಾಲನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಸನ್ಮಾನ

ಕುಶಾಲನಗರ, ಜು 31: ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಬಾರಿ ಪ್ರಕಟಗೊಂಡ ವಾರ್ಷಿಕ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿ ಉತ್ತೀರ್ಣರಾದ ಕುಶಾಲನಗರದ ಆಟೋ ಚಾಲಕರಾದ ಜೋಸೆಫ್ ವಂದನಾಥ್ ಅವರ ಪುತ್ರಿ ಜಾಯ್ಸ್ ಲೆನಾ ಅವರ ಸಾಧನೆಯನ್ನು ಕುಶಾಲನಗರದ ಹಲವು ಸಂಘ ಸಂಸ್ಥೆಗಳು ಗೌರವಿಸುತ್ತಿವೆ.

ಬುಧವಾರ ಕೊಡಗು ಬೆಳಕು ಚಾರಿಟೇಬಲ್ ಟ್ರಸ್ಟ್ ಹಾಗೂ ಸಾಮಿಲ್ ಅಸೋಸಿಯೇಷನ್ ವತಿಯಿಂದ ಬಸವೇಶ್ವರ ಬಡಾವಣೆಯ ಅವರ ನಿವಾಸದಲ್ಲಿ ಗೌರವಿಸಲಾಯಿತು.
ಈ ಸಂದರ್ಭ ಬೆಳಕು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಹೆಚ್. ಮೊಹಮ್ಮದ್, ಸಾಮಿಲ್ ಅಸೋಸಿಯೇಷನ್ ಉಪಾಧ್ಯಕ್ಷ ವಿಜಯರಾಜು, ಹೋಟೆಲ್ ಉದ್ಯಮಿಯೂ ಆದ ಸಮಾಜ ಸೇವಕ ದಾವುದ್, ಸಲೀಂ,ಅಜೀಜ್,ಲತೀಫ್, ಹಮೀದ್ ಮೊದಲಾದವರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!