ಕುಶಾಲನಗರ, ಜು 26 : ಇಲ್ಲಿನ ಅನುಗ್ರಹ ವಿದ್ಯಾಸಂಸ್ಥೆಯ ಪಿಯುಸಿ ಹಾಗೂ ಪದವಿ ವಿಭಾಗದ ವಿದ್ಯಾರ್ಥಿ ಸಮಿತಿಗಳ ಉದ್ಘಾಟನೆ ಹಾಗೂ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಸೀನಪ್ಪ
ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕಿದೆ.
ದಾರಿ ತಪ್ಪಿಸುವ ವಯಸ್ಸಾದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಬಹಳಷ್ಟು ಏಕಾಗ್ರತೆ ವಹಿಸಿ ವ್ಯಾಸಂಗ ಮಾಡುವ ಮೂಲಕ ತಮ್ಮ ಸುಂದರವಾದ ಕಾಲೇಜು ಅವಧಿಯನ್ನು ಒಳಿತಿಗೆ ಬಳಸಿಕೊಂಡು ಸಮಾಜದ ಸತ್ಪ್ರಜೆಯಾಗಬೇಕೆಂದು ಕರೆಕೊಟ್ಟರು. ವಿದ್ಯಾರ್ಥಿಗಳು ಆಸಕ್ತಿದಾಯಕ ಕ್ಷೇತ್ರಗಳನ್ನು ಆರಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ತೋರುವ ಮೂಲಕ ಸಮಾಜದ ಆಸ್ತಿಯಾಗಬೇಕು.
ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕೆ ಮೀಸಲಾಗದೆ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಗಳಾಗಬೇಕೆಂದು ಡಾ.ಸೀನಪ್ಪಾ ಕರೆಕೊಟ್ಟರು.
ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಎಸ್.ಕೆ.ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿ ನಿರ್ದೇಶಕರಾದ ಶೋಭಾ ಸತೀಶ್, ಕೆ.ಕೆ.ಹೇಮಂತಕುಮಾರ್, ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ, ಪಿಯು ವಿಭಾಗದ ಉಪಪ್ರಾಂಶುಪಾಲೆ ಎಂ.ಎಸ್.ಸೀಮಾ, ಪದವಿ ವಿಭಾಗದ ಬಿ.ಎಸ್.ಹರ್ಷಿತಾ, ವಿದ್ಯಾರ್ಥಿ ಸಮಿತಿ ಸಂಯೋಜಕರಾದ ಬಿ.ಎಸ್.ಶ್ವೇತಾ, ಬಿ.ಎಸ್.ಹರ್ಷಿತಾ, ಸಾಂಸ್ಕೃತಿಕ ಸಂಯೋಜಕರಾದ ನುಸೃತ್, ಲೀಲಾ ಕುಮಾರಿ, ಪಿಯು ವಿಭಾಗದ ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಕೆ.ಎಂ.ಯೋಗಿತಾ, ಕಾರ್ಯದರ್ಶಿ ಎಂ.ಡಿ.ಕೇಶವ, ಜಂಟಿ ಕಾರ್ಯದರ್ಶಿ ಸಿ.ಟಿ.ಹೇಮಂತಕುಮಾರ್, ಕ್ರೀಡಾ ಕಾರ್ಯದರ್ಶಿ ಎಂ.ಬಿ.ಭರತ್, ಸಾಂಸ್ಕೃತಿಕ ಕಾರ್ಯದರ್ಶಿ ಎಸ್.ಎಲ್.ಕೀರ್ತಿ
ಪದವಿ ಕಾಲೇಜು ವಿಭಾಗದ ಉಪಾಧ್ಯಕ್ಷ ಎಂ.ವಿ.ವಿನಯ್, ಕಾರ್ಯದರ್ಶಿ ಪಿ.ಜಯಶ್ರೀ, ಜಂಟಿ ಕಾರ್ಯದರ್ಶಿ ಜಿ.ಜಿ.ತೇಜಸ್ವಿನಿ, ಶೇಜನ್, ಕ್ರೀಡಾ ಕಾರ್ಯದರ್ಶಿ ಹೆಚ್.ಜೆ.ಆಕಾಶ್, ಪ್ರತಿಮಾ, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಎಂ.ದರ್ಶನ್, ಎಂ.ಎಸ್.ಸುನೀತಾ ಇದ್ದರು.
ವಿದ್ಯಾರ್ಥಿನಿ ಫಾಮಿದಾ ಸ್ವಾಗತಿಸಿದರು.
ದರ್ಶನ್ ನಿರೂಪಿಸಿ ಚಂದನ ವಂದಿಸಿದರು.
ಉಪನ್ಯಾಸಕಿ ರೇಷ್ಮಾ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಇದೇ ಸಂದರ್ಭ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ವೈವಿಧ್ಯಗಳು ನೆರವೇರಿದವು.
Back to top button
error: Content is protected !!