ಕಾರ್ಯಕ್ರಮ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕುಶಾಲನಗರ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭ

ಕುಶಾಲನಗರ, ಜು 21:ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭವನ್ನು ಕುಶಾಲನಗರದ ಪ್ರವಾಸಿ ಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ವಾಸು ಸಮುದ್ರವಳ್ಳಿ ಯವರು ವಹಿಸಿದ್ದರು. ಇವರು ಪ್ರಾಸ್ತಾವಿಕ ನುಡಿಗಳ ನಾಡುತ್ತಾ ಎಲೆಮರೆಯ ಸಾಹಿತಿಗಳು ಬೆಳಕಿಗೆ ಬರಬೇಕು, ಹೊಸ ಸಾಹಿತಿಗಳಿಗೆ ಅವಕಾಶ ಸಿಗಬೇಕು, ಎಲ್ಲಾ ಸಾಹಿತಿಗಳಿಗೂ ಸಮಾನ ವೇದಿಕೆ ದೊರೆಯಬೇಕು ಎಂದು ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಫ್ಯಾನ್ಸಿ ಮುತ್ತಣ್ಣ ಅವರು ಉದ್ಘಾಟಿಸಿದರು. ಅವರು ಸಾಹಿತ್ಯದ ಸಾಲುಗಳು ಕೇವಲ ಅಕ್ಷರಗಳಲ್ಲ ಅದು ಕವಿಯ ಭಾವನೆ, ಕವಿತೆಗಳು ಮನಸ್ಸಿನಿಂದ ಹುಟ್ಟುತ್ತದೆ, ಭಾವನೆಗಳನ್ನು ವ್ಯಕ್ತಪಡಿಸುತ್ತದೆ, ಯಾರಿಗೂ ವ್ಯಕ್ತಪಡಿಸಲಾಗದ ಕೆಲವೊಂದು ಭಾವನೆಗಳು ಕವಿತೆಯ ರೂಪ ತಾಳುತ್ತದೆ. ಮಹಿಳೆಯರು ಹೆಚ್ಚು ಕವಿತೆಗಳನ್ನು ಬರೆಯಬೇಕು ಎಂದು ತಮ್ಮ ಉದ್ಘಾಟನಾ ಭಾಷಣವನ್ನಾಡಿದರು. ಕುಶಾಲನಗರ ಘಟಕದ ನೂತನ ಅಧ್ಯಕ್ಷರಾದಂತಹ ಶ್ರೀ ದಿನೇಶಾಚಾರಿ ಹೆಚ್. ಬಿ ಅವರು ಮಾತನಾಡಿ ಕುಶಾಲನಗರ ಘಟಕದ ವತಿಯಿಂದ ವಿನೂತನ ಕಾರ್ಯಕ್ರಮಗಳನ್ನು, ಹಳ್ಳಿಯ ಸೊಬಗನ್ನು ಬಿಂಬಿಸುವ ಕೆಸರುಗದ್ದೆ, ಇತರ ಕ್ರೀಡಾಕೂಟಗಳನ್ನು, ಹೆಚ್ಚೆಚ್ಚು ಕವಿಗೋಷ್ಠಿಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವುದಾಗಿ ಹೇಳಿದರು. ಎಲ್ಲಾ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವುದು ಈ ವೇದಿಕೆಯ ಉದ್ದೇಶ ಎಂದು ತಮ್ಮ ಮನದಾಳದ ಮಾತುಗಳನ್ನಾಡಿದರು. ಎಲ್ಲಾ ಪದಾಧಿಕಾರಿಗಳಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲೆಯ ಅಧ್ಯಕ್ಷರಾದಂತಹ ಶ್ರೀ ಹೆಚ್ ಬಿ ರಘು ಕೋಟಿ ಅವರು ಪದವಿ ಪ್ರಧಾನ ಮಾಡಿ ಕನ್ನಡ ಸಾಹಿತ್ಯದ ಕಂಪು ಪ್ರಪಂಚದಲ್ಲೆಡೆ ಪಸರಿಸಬೇಕು, ಪ್ರತಿಯೊಬ್ಬ ಸಾಹಿತಿಗೂ ಯಾವುದೇ ತಾರತಮ್ಯವಿಲ್ಲದೆ ಮುಕ್ತ ಅವಕಾಶ ದೊರೆಯಬೇಕು, ಸಾಹಿತಿಗಳನ್ನು ಬೆಳಕಿಗೆ ತರುವಲ್ಲಿ ಪತ್ರಿಕಾ ಮಾಧ್ಯಮವು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲೆಯ ಗೌರವಾಧ್ಯಕ್ಷರಾದಂತಹ ಶ್ರೀ ಜವರಪ್ಪ ಹೆಚ್ಚು ಜೆ ಹಾಗೂ ಸೋಮವಾರಪೇಟೆ ಘಟಕದ ಅಧ್ಯಕ್ಷರಾದಂತಹ ಶ್ರೀಮತಿ ಶರ್ಮಿಳ ರಮೇಶ್ ರವರು ಶುಭಕೋರಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಶ್ರೀಮತಿ ಫ್ಯಾನ್ಸಿ ಮುತ್ತಣ್ಣ ರವರನ್ನು ಹಾಗೂ ಸಂಘಟನಾ ಕಾರ್ಯದರ್ಶಿಯವರಾದ ಶ್ರೀಯುತ ವಾಸು ಸಮುದ್ರವಳ್ಳಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕುಶಲ್ನಗರ ಘಟಕದ ತಾಲೂಕು ಉಪಾಧ್ಯಕ್ಷರಾದಂತಹ ಅಮೃತ ಕೆ. ವಿ. ನಿರ್ವಹಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಸವನಹಳ್ಳಿ ಸಂಗೀತ ಶಿಕ್ಷಕರಾದಂತಹ ಪುಟ್ಟರಾಜ್ ರವರು ಎಲ್ಲರಿಗೂ ಸ್ವಾಗತ ಕೋರಿದರು. ತಾಲೂಕು ಘಟಕದ ಕಾರ್ಯದರ್ಶಿಯವರಾದಂತಹ ಅಂಕಿತ ರವರು ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರನ್ನು ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!