ಕುಶಾಲನಗರ, ಜು 08: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ರೋಟರಿ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷೆ ಯಾಗಿ ರೇಷ್ಮಾ ನವೀನ್ ಅಧಿಕಾರ ವಹಿಸಿಕೊಂಡರು.
2024-25 ಸಾಲಿನ ಅಧ್ಯಕ್ಷೆ ಚಿತ್ರಾ ರಮೇಶ್ ರವರು ಅಧಿಕಾರವನ್ನು ನೂತನ ವಾಗಿ ಆಯ್ಕೆ ಯಾದಂತ ರೇಷ್ಮಾ ನವೀನ್ ರವರಿಗೆ ಹಸ್ತಾಂತರಿಸಿದರು
ನೂತನ ಅಧ್ಯಕ್ಷೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ ನಮ್ಮ ಇನ್ನರ್ ವೀಲ್ ಸಂಸ್ಥೆ ಹೊಸ ಉನ್ನತಿಗಳತ್ತ ಸಾಗಲಿದೆ ಎಂಬ ಆಶ್ವಾಸನೆ ನೀಡಿದರು,ಅನುಭವಿಸಿದ ಪ್ರತಿ ಕ್ಷಣ ಅಮೂಲ್ಯವಾಗಿತ್ತು, ಮತ್ತು ಈಗ ಅದೇ ಆಸೆ ಮತ್ತು ಪ್ರೋತ್ಸಾಹವನ್ನು ಹಸ್ತಾಂತರಿಸಿ, ಮುಂದಿನ ಕಾರ್ಯಕರ್ತತೆಗೆ ಬೆಂಬಲವಾಗಿ ಸದಾ ಸಂಸ್ಥೆಯಲ್ಲಿ ಇರುವುದಾಗಿ,ಯಶಸ್ವಿ ಅವಧಿಗೆ ಶುಭಾಶಯಗಳನ್ನು ತಿಳಿಸಿದರು.
ಕಾರ್ಯದರ್ಶಿ ಸುಪ್ರೀತಾ ರವಿ
ನಿಕಟ ಪೂರ್ವ ಅಧ್ಯಕ್ಷೆ ಚಿತ್ರಾ ರಮೇಶ್,
ಖಜಾಂಚಿ ಶೀನಾ ಪ್ರಕಾಶ್
ಉಪಾಧ್ಯಕ್ಷೆ ಸೀತಾಲಕ್ಷ್ಮಿ,
ಐ ಎಸ್ ಒ- ಮಾಲತಿ ಲೋಕೇಶ್
ಸಂಪಾದಕಿ ಪೂರ್ಣಿಮಾ ರಾಜೀವ್ ಇದ್ದರು.
ಈ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಸಿಇಟಿ ಪರೀಕ್ಷೆಯಲ್ಲಿ ಗಳಿಸಿರುವ ಕೌಶಿಕ್ ರವರನ್ನು ಸನ್ಮಾನಿಸಲಾಯಿತು. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿರುವ ಮಾಸ್ಟರ್ ಚಿನ್ಮಿತ್, ಬ್ಲೈಂಡ್ ಫೋಲ್ಡ್ ಧರಿಸಿ ಚೆಸ್ ಪಾನ್ಸ್ ಅನ್ನು ಅತಿ ವೇಗವಾಗಿ ವ್ಯವಸ್ಥೆ ಮಾಡಿರುವ ಇವರನ್ನು ಸಹ ಗೌರವಿಸಲಾಯಿತು. ಬಡ ಹೆಂಗಸನ್ನು ಸಂಸ್ತೆಯವತಿಯಿಂದ ಗುರುತಿಸಿ ಅವರಿಗೆ ಮೂರು ತಿಂಗಳಿಗಾಗುವಷ್ಟು ರೇಷನ್ ವಿತರಿಸಲಾಯಿತು. ಹಿರಿಯ ನಾಗರಿಕ ರೊಬ್ಬರಿಗೆ ಉಚಿತ ಕಣ್ಣಿನ ಕನ್ನಡಕ ವಿತರಣೆ ಮಾಡಲಾಯಿತು ಇದು ಅವರ ದೃಷ್ಟಿಶಕ್ತಿಯನ್ನು ಸುಧಾರಿಸಲು ಮತ್ತು ದೈನಂದಿನ ಜೀವನವನ್ನು ಸುಲಭಗೊಳಿಸಲು ಸಹಾಯವಾಗಲಿದೆ, ವಿಕಲಾಂಗ ಮಗುವಿಗೆ ಡೈಪರ್ಸ್ ನೀಡಲಾಯಿತು.
ನಮ್ಮ ಸಂಸ್ಥೆ ಸಮಾಜದ ಕ್ಷೇಮಾಭಿವೃದ್ಧಿಗಾಗಿ ಸದಾ ಬದ್ಧವಾಗಿದೆ
ಸೇವಾ ಚಟುವಟಿಕೆಗಳನ್ನು ವಿಸ್ತಾರಗೊಳಿಸುವುದು – ಸಮಾಜದಲ್ಲಿ ಅಗತ್ಯವಿರುವವರು ಯಾರು ಎಂಬುದನ್ನು ಗುರುತಿಸಿ, ಅವರಿಗೆ ನೆರವಿನ ಹಸ್ತವನ್ನು ಚಾಚುವುದು.
ಸಮೃದ್ಧಿ ಹಾಗೂ ಸಬಲೀಕರಣಕ್ಕೆ ಒತ್ತು ನೀಡುವುದು,
ಕ್ಲಬ್ ಸದಸ್ಯರ ಒಕ್ಕೂಟವನ್ನು ಬಲಪಡಿಸುವುದು ,ವ್ಯಕ್ತಿತ್ವ ಅಭಿವೃದ್ಧಿ,ಪರಿಸರ ಸಂರಕ್ಷಣೆಗೆ ಗಮನಹರಿಸಲಾಗುವುದು ಎಂದು ನೂತನ ಅಧ್ಯಕ್ಷೇ ರೇಷ್ಮಾ ನವೀನ್ ರವರು ಸಂಸ್ಥೆಯ ಮುಖ್ಯ ಗುರಿಗಳನ್ನು ಹೇಳಿದರು .
ಕಾರ್ಯಕ್ರಮದಲ್ಲಿ, ಇನ್ನರ್ ವೀಲ್ ಸಂಸ್ಥೆಯ ಎಲ್ಲಾ ಮಾಜಿ ಅಧ್ಯಕ್ಷರು, ಸದಸ್ಯರು, ರೋಟರಿ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಡಿದ್ದರು.
Back to top button
error: Content is protected !!