ಕಾಮಗಾರಿ

ಕೂಡಿಗೆ, ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ 50 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ

ಕುಶಾಲನಗರ, ಜೂ 11:ಕೂಡಿಗೆ ಹಾಗೂ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹುದುಗೂರು ಹಾಗೂ ಕೂಪ್ ಹಾಡಿಯಲ್ಲಿ ರೂ 50 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಹುದುಗೂರಿನ ಗಂಧದ ಹಾಡಿಗೆ ರಸ್ತೆ ಹಾಗು ಗಣೇಶ್ ಮನೆ ಹತ್ತಿರ 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮೋರಿ ನಿರ್ಮಾಣ ಕಾಮಗಾರಿ ಹಾಗೂ ರೂ 25 ಲಕ್ಷ ವೆಚ್ಚದಲ್ಲಿ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ
ಮಾವಿನಹಳ್ಳದಲ್ಲಿ ಚಿಕ್ಲಿಹೊಳೆ ನಾಲೆಯ ಕಾಲು ಸೇತುವೆ ಅಗಲೀಕರಣ ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅವರು ಚಾಲನೆ ನೀಡಿದರು.
ಇದೇ ಸಂದರ್ಭ ರಂಗಸಮುದ್ರದಿಂದ ಮಾವಿನಹಳ್ಳಕ್ಕೆ ತೆರಳುವ ಮಾರ್ಗದ ಚಿಕ್ಲಿಹೊಳೆ ಮುಖ್ಯ ನಾಲೆ ಸೇತುವೆ ತಡೆಗೋಡೆ ಕುಸಿದಿರುವ ಬಗ್ಗೆ ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳ ಶಾಸಕರ ಗಮನ ಸೆಳೆದರು. ಈ ಸಂದರ್ಭ ಸೇತುವೆ ಪರಿಶೀಲಿಸಿದ ಶಾಸಕರು, ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರು. ಉಳಿದಂತೆ ಭೂಮಿಪೂಜೆ ನೆರವೇರಿಸಿದ
ಕಾಮಗಾರಿ ಕೂಡಲೆ ಆರಂಭಿಸಿ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭ ತಹಸೀಲ್ದಾರ್ ಕಿರಣ್ ಗೌರಯ್ಯ, ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಉಪಾಧ್ಯಕ್ಷ ಕುಸುಮ, ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರ ಸದಸ್ಯ ಸಜಿ ವಿ.ಎಸ್. ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ನಂಜರಾಯಪಟ್ಟಣ, ಕೂಡಿಗೆ ಗ್ರಾಪಂ ಸದಸ್ಯರುಗಳು, ಕಾಂಗ್ರೆಸ್ ಪ್ರಮುಖರು, ಆಯಾ ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!