ಅರಣ್ಯ ವನ್ಯಜೀವಿ

ಪ್ರವಾಸಿ ತಾಣಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇದ: ಜೂ.1 ರಿಂದ ಜಾರಿ, ತಪ್ಪಿದಲ್ಲಿ ದಂಡ

ಕುಶಾಲನಗರ, ‌ಮೇ 31:ಕೊಡಗು ಜಿಲ್ಲೆಯ ಮಡಿಕೇರಿ ಪ್ರಾದೇಶಿಕ ವಿಭಾಗದ ಕುಶಾಲನಗರ ವಲಯ ವ್ಯಾಪ್ತಿಯ ದುಬಾರೆ ಸಾಕಾನೆ ಶಿಬಿರ /ಕಾವೇರಿ ನಿಸರ್ಗಧಾಮ/ಹಾರಂಗಿ ಸಾಕಾನೆ ಶಿಬಿರ ಪ್ರವಾಸಿ ತಾಣಗಳು ಅತೀ ಪ್ರಮುಖವಾಗಿದ್ದು ಸದ್ರಿ ಪ್ರವಾಸಿ ತಾಣಗಳಲ್ಲಿ ಇರುವ ಸಾಕಾನೆಗಳು, ಜಿಂಕೆಗಳು ಇತರೆ ಪ್ರಾಣಿ ಪಕ್ಷಿಗಳಿಗೂ ಪ್ಲಾಸ್ಟಿಕ್ ಬಳಕೆಯಿಂದ ಹಾನಿ ಉಂಟಾಗುತ್ತಿರುತ್ತದೆ. ಪ್ರವಾಸಿ ತಾಣಕ್ಕೆ ಹೆಚ್ಚಾಗಿ ಆಗಮಿಸುತ್ತಿರುವ ಪ್ರವಾಸಿಗರು ಎಲ್ಲೆಂದರಲ್ಲಿ ನೀರಿನ ಬಾಟಲಿ, ಪಾನೀಯ ಬಾಟಲಿ, ಪ್ಲಾಸ್ಟಿಕ್ ಕವರ್, ಚಾಕಲೇಟ್ ಕವರ್, ಚಿಪ್ಸ್ ಪ್ಯಾಕೇಟ್ ಇತ್ಯಾದಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಹಾಕುತ್ತಿರುವುದರಿಂದ ಪ್ರಣಿ ಪಕ್ಷಿಗಳಿಗೂ ಹಾನಿಯಾಗುವುದಲ್ಲದೇ ಪ್ರವಾಸಿ ತಣದ ಶುಚಿತ್ವ ಹಾಳಾಗಿ ಸಾಕಾನೆ ಶಿಬಿರದಲ್ಲಿ ಇರುವ ಆನೆಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುತ್ತದೆ. ಆದ್ದರಿಂದ ಸದ್ರಿ ಪ್ರವಾಸಿ ತಾಣಗಳಲ್ಲಿ ದಿನಾಂಕ : 01-06-2025 ರಿಂದ ಜಾರಿಗೆ ಬರುವಂತೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸದ್ರಿ ಪ್ರವಾಸಿ ತಾಣಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿದ್ದಲ್ಲಿ ರೂ. 100.00 ಮೊತ್ತವನ್ನು ದಂಡವಾಗಿ ವಿಧಿಸಲಾಗುವುದು ಎಂದು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!