ಆರೋಪಟ್ರೆಂಡಿಂಗ್

ನಂದಿನಿ ಕ್ಷೀರ ಕೇಂದ್ರದಲ್ಲಿ ಹೆಚ್ಚುವರಿ ದರಕ್ಕೆ ಮಾರಾಟ.

ಸೋಮವಾರಪೇಟೆ, ಫೆ 28:ಪಟ್ಟಣದ ನಂದಿನಿ ಕ್ಷೀರ ಕೇಂದ್ರದಲ್ಲಿ ಹಾಲು,ಮೊಸರು,ಮಜ್ಜಿಗೆಗೆ ನಿಗದಿತ ದರಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಕೆಲವು ಸಾರ್ವಜನಿಕರಿಂದ ದೂರುಬಂದ ಹಿನ್ನಲೆಯಲ್ಲಿ ಕ್ಷೀರ ಕೇಂದ್ರಕ್ಕೆ ತೆರಳಿ ಮಜ್ಜಿಗೆ ಪ್ಯಾಕೆಟ್ ಖರೀದಿಸಲಾಯಿತು ಅದರ ಮೇಲೆ ಗರಿಷ್ಠ ಮಾರಾಟ ದರ 9ರೂಪಾಯಿ ಮುದ್ರಿತವಾಗಿದ್ದರು 10 ರು ಪಡೆದುಕೊಂಡರು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಲ್ಲಿದ್ದ ಮಹಿಳಾ ವರ್ತಕರು ನಾವು ಫ್ರಿಜ್ ನಲ್ಲಿ ಇಟ್ಟಿರುತೇವೆ ಅದಕ್ಕೆ ಹೆಚ್ಚಿಗೆ ತೆಗೆದುಕೊಳ್ಳುತ್ತೇವೆ ಎಂದರು.ಇದು ಕೆಎಂಎಫ್ ರವರ ಕೇಂದ್ರ ಅಲ್ವಾ ಇಲ್ಲಿ ಹೆಚ್ಚಿನ ಬೆಲೆಗೆ ಮಾರುವಂತಿಲ್ಲ ಅಂದರೆ ಅದೆಲ್ಲಾ ಗೊತ್ತಿಲ್ಲಾ ನಾವು ಮಾರುವುದು ಇಷ್ಟಕ್ಕೆ ಎಂದು ಉಡಾಫೆ ಉತ್ತರ ನೀಡಿದರು.
ಸರ್ಕಾರಿ ಸ್ವಾಮ್ಯದ ಕೆಎಂಎಫ್ ನ ಕೇಂದ್ರಗಳಲ್ಲಿ ಗರಿಷ್ಠ ಮಾರಾಟದರಕಿಂತ ಹೆಚ್ಚಿನ ದರಕ್ಕೆ ಮಾರುವುಂತಿಲ್ಲಾ ಆದರೂ ಸೋಮವಾರಪೇಟೆಯಲ್ಲಿ ನಡೆಯುತ್ತಿದೆ ಸಂಬಂಧಿಸಿದವರು ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.
ಗ್ರಾಹಕರ ಸೇವೆಗೆಂದಿರುವ ಈ ಕೇಂದ್ರ ಬಹುತೇಕ ದಿನಗಳಲ್ಲಿ ಮದ್ಯಾಹ್ನದ ವೇಳೆ ಮುಚ್ಚಿರುವುದರಿಂದ ಮದ್ಯಾಹ್ನದ ನಂತರ ಹಾಲು ಬೇಕಾದವರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ವಾರ್ಷಿಕ ಕೊಟ್ಯಾಂತ ರೂಪಾಯಿ ಲಾಭಗಳಿಸುವ ಕೆಎಂಎಫ್ ಇಲ್ಲಿನ ಕ್ಷೀರ ಕೇಂದ್ರಕ್ಕೆ ಒಂದು ನಾಮ ಪಲಕವನ್ನು ಅಳವಡಿಸಲಾರದಷ್ಟು ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ.

Related Articles

Leave a Reply

Your email address will not be published. Required fields are marked *

Back to top button
error: Content is protected !!