ಆರೋಪ

ದಂಡಿನಮ್ಮ ಕೆರೆ ಒತ್ತುವರಿ ಸ್ಧಳಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಭೇಟಿ: ಪರಿಶೀಲನೆ

ಕುಶಾಲನಗರ, ಜ 14: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದಂಡಿನಮ್ಮ ಕೆರೆ ಒತ್ತುವರಿಯಾಗುತ್ತಿದೆ ಎಂದು ಭುವನಗಿರಿ ಗ್ರಾಮದ ಗ್ರಾಮಸ್ಥರು ನೀಡಿದ ದೂರದ ಮೇರೆಗೆ ಕೂಡಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ಸದಸ್ಯರು, ಮತ್ತು ಅಭಿವೃದ್ಧಿ ಅಧಿಕಾರಿ ವರ್ಗದವರು ಸ್ಧಳಕ್ಕೆ ತೆರಳಿ ಸ್ಧಳ ಪರಿಶೀಲನೆ ನಡೆಸಿದರು.
ದಂಡಿನಮ್ಮ ಕೆರೆಯ ಜಾಗವನ್ನು ಕೆಲ ಭಾಗಗಳಲ್ಲಿ ಸ್ಥಳೀಯ ರೈತರು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಗಮನಿಸಿದ ಆಡಳಿತ ಮಂಡಳಿಯವರು ಮೇಲ್ ನೋಟಕ್ಕೆ ಜಾಗದ ಒತ್ತುವರಿ ಅಗಿರುವುದು ಕಂಡುಬಂದರೂ ಕಂದಾಯ ಇಲಾಖೆಯ ಮೂಲಕ ನಿಯಮಾನುಸಾರ ಕೆರೆಯ ಸರ್ವೆ ಕಾರ್ಯವನ್ನು ಕ್ರಮಬದ್ಧವಾದ ನಡೆಸುವಂತೆ ಪತ್ರವ್ಯವಹಾರ ಮಾಡಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಮಂಜುಳಾ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಅನಂತ, ಚಂದ್ರು, ಜಯಶೀಲಾ, ಸಹಕಾರ ಸಂಘದ ನಿರ್ದೇಶಕ ಎಸ್. ಎಸ್. ಕೃಷ್ಣ, ಮದಲಾಪುರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಅರ್. ಎಸ್. ಸುನಿಲ್ ರಾವ್, ಭುವನಗಿರಿ ಗ್ರಾಮದ ಪ್ರಮುಖರಾದ ಕೃಷ್ಣ , ಮಂಜುನಾಥ, ಕುಮಾರ್, ವಿರೋಪಾಕ್ಷ, ತಿಲಕ್, ಶಾಂತಕುಮಾರ್, ಪಾರ್ವತಮ್ಮ, ಮಲ್ಲೇಶ್, ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!