ಕುಶಾಲನಗರ, ಆ 29: ಹಾರಂಗಿಯಲ್ಲಿ ವಿದ್ಯುತ್ ಪೂರೈಸಲು ಹೆಚ್ಚುವರಿ ವಿದ್ಯುತ್ ಸ್ಪೀಡರ್ ಅಳವಡಿಕೆ ಮಾಡಲಾಗುತ್ತಿದೆ.
ಹಾರಂಗಿ ಮತ್ತು ಯಡವನಾಡು, ಅತ್ತೂರು ಗ್ರಾಮಕ್ಕೆ ತಡೆ ಇಲ್ಲದೆ ವಿದ್ಯುತ್ ಸರಬರಾಜು ಮಾಡಲು ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಕೆಗೆ
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಮಾಡಿದ ಹಿನ್ನೆಲೆ ವಿದ್ಯುತ್ ಫೀಡರನ್ನು ಅಳವಡಿಕೆ ಮಾಡಲಾಗಿದೆ ಮತ್ತು ಚಿಕ್ಕತ್ತೂರು ಹಾಗೂ ಹುಲುಗುಂದ ಗ್ರಾಮದಲ್ಲಿ ಹೊಸದಾಗಿ GOS ಅಳವಡಿಕೆ ಮಾಡಲಾಗುತ್ತಿದೆ.
ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಭಾಸ್ಕರ್ ನಾಯಕ್, ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮತ್ತು ರಾಜ್ಯಕ್ಕೆ ನೀರುಣಿಸುವ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದಂತಾಗಿತ್ತು. ಕುಶಾಲನಗರದಿಂದ ಕೂಡಿಗೆ ಭುವನಗಿರಿ ಮಾರ್ಗವಾಗಿ ಸುಮಾರು 60km ನಷ್ಟು ಬಳಸಿಕೊಂಡು ಬಂದು ಕೊನೆಯದಾಗಿ ಹಾರಂಗಿ ಮತ್ತು ಯಡವನಾಡು, ಅತ್ತೂರು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಆಗುತ್ತಿತ್ತು. ಈ ಮಾರ್ಗ ಮಧ್ಯ ಯಾವುದಾದರೂ ಮರ ವಿದ್ಯುತ್ ತಂತಿ ಮೇಲೆ ಬಿದ್ದರೆ ವಿದ್ಯುತ್ ಕಡಿತವಾಗುತ್ತಿತ್ತು. ಸಣ್ಣ ಗಾಳಿ ಮಳೆ ಬಂದರೂ ಸಹ ಹಾರಂಗಿ ಅಣೆಕಟ್ಟೆಗೆ ವಿದ್ಯುತ್ ಸರಬರಾಜು ಇಲ್ಲದಂತಾಗುತ್ತಿತ್ತು ಮತ್ತು ವಿದ್ಯುತ್ ಕಡಿತವಾದ ಕೂಡಲೇ ಅಣೆಕಟ್ಟೆಯ ಮುಂಭಾಗದಲ್ಲಿರುವ BSNL ಟವರ್ ನಲ್ಲಿ ಯಾವುದೇ ನೆಟ್ವರ್ಕ್ ಇಲ್ಲದಂತಾಗುತ್ತಿತ್ತು. ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜಿಗೂ ಸಮಸ್ಯೆ ಉಂಟಾಗುತ್ತಿತ್ತು. ಈಗ ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಕೆ ಮಾಡಿ ಕುಶಾಲನಗರದಿಂದ ಸುಂದರನಗರ ಮಾರ್ಗವಾಗಿ ವಿದ್ಯುತ್ತನ್ನು ಸರಬರಾಜು ಮಾಡುವುದರಿಂದ ಸಮಸ್ಯೆಗಳು ಒಂದಷ್ಟು ಬಗೆಹರಿಯಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
Back to top button
error: Content is protected !!