ಕಾರ್ಯಕ್ರಮ

ದ್ವಿಚಕ್ರ ವಾಹನಗಳಿಗೆ ಸೀಟ್ ಬೆಲ್ಟ್ ಕಡ್ಡಾಯ

ಕುಶಾಲನಗರ, ಆ 23:ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗೆ ಕ್ರಮವಹಿಸುವ ಹಿನ್ನಲೆಯಲ್ಲಿ ಕುಶಾಲನಗರದ ಕಾವೇರಿ ಹೋಂಡ ದ್ವಿಚಕ್ರ ವಾಹನ ಶೋರೂಂ ನಲ್ಲಿ ಸಾರಿಗೆ ಅಧಿಕಾರಿಗಳು ಜಾಗೃತಿ‌ ಮೂಡಿಸಿದರು.

1 ರಿಂದ 4 ವರ್ಷ ಮಕ್ಕಳಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದ್ದು ಈ ಬಗ್ಗೆ ಮುಂದಿನ ಮೂರು ತಿಂಗಳು ಜಾಗೃತಿ ಮೂಡಿಸಲಾಗುವುದು. ನಂತರ ದಂಡ ವಿಧಿಸಲಾಗುವುದು ಎಂದು ರಸ್ತೆ ಸಾರಿಗೆ ಸಂಚಾರಿ ನಿಯಂತ್ರಣ ಅಧಿಕಾರಿ ನಾಗರಾಜಾಚಾರ್ ತಿಳಿಸಿದರು.

ಈಗಾಗಲೆ ನಿಯಮ‌ ಜಾರಿಗೆ‌ ಬಂದದ್ದು ಅಪಘಾತ ಸಂದರ್ಭ ಮಕ್ಕಳಿಗೆ ಉಂಟಾಗುವ ಹಾನಿ ತಪ್ಪಿಸಲು ಈ ಕ್ರಮವಹಿಸಲಾಗಿದೆ. ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಎಲ್ಲೆಡೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಬ್ರೇಕ್ ಇನ್ಸ್ ಪೆಕ್ಟರ್ ಎಂ.ಶಿವಕುಮಾರ್, ಶೋರೋಂ ಮಾಲೀಕ ವಿನೋದ್ ಮತ್ತು ಸಿಬ್ಬಂದಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!