ಕುಶಾಲನಗರ, ಮಾ 27:ಸೋಮವಾರಪೇಟೆ ತಾಲೂಕು ಆರ್.ಡಿ.ಪಿ.ಆರ್. ಸಹಾಯಕ ಅಭಿಯಂತರ ಎಂ.ಎಂ.ಫಯಾಜ್ ಅಹಮ್ಮದ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನಲೆ ಮಡಿಕೇರಿ ಲೋಕಾಯುಕ್ತ ಎಂ.ಎಸ್. ಪವನ್ ಕುಮಾರ್ ನೇತೃತ್ವ ದಲ್ಲಿ ಫಯಾಜದ ಅಹಮ್ಮದ್ ಅವರ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 5 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭ ಶೇ.175% ರಷ್ಟು ಆದಾಯ ಮೀರಿದ ಅಸಮತೋಲನ ಸಂಪತ್ತು ಪತ್ತೆಯಾಗಿದೆ.
75 ಲಕ್ಷ ಮೌಲ್ಯದ 2 ಮನೆ, 40 ಲಕ್ಷ ಮೌಲ್ಯದ 4 ಎಕರೆ ಕೃಷಿ ಭೂಮಿ, 48,070 ರೂ ನಗದು, 2, 95, 800 ರೂ ಮೌಲ್ಯದ ಚಿನ್ನಾಭರಣ, 24,75,000 ಮೌಲ್ಯದ ವಾಹನಗಳು, ಇತರೆ ರೂ 53,81,905 ಸೇರಿದಂತೆ ಒಟ್ಟು 1 ಕೋಟಿ 69 ಲಕ್ಷ ಅಸಮತೋಲನ ಸಂಪತ್ತು ಪತ್ತೆಯಾಗಿದೆ.
Back to top button
error: Content is protected !!