ಸುದ್ದಿಗೋಷ್ಠಿ

ಅಲ್ಪಾವಧಿಯಲ್ಲಿ ಶಾಸಕ ಮಂಥರ್ ಗೌಡರಿಂದ ವಿವಿಧ ಅಭಿವೃದ್ದಿ ಯೋಜನೆ ಅನುಷ್ಠಾನ

ಎಲ್ಲರನ್ನೂ ಚಕಿತಗೊಳಿಸುವ ರೀತಿಯ ಕೆಲಸಕ್ಕೆ‌ ಕಾಂಗ್ರೆಸಿಗರಿಂದ ಶ್ಲಾಘನೆ

ಕುಶಾಲನಗರ, ಮಾ 16: ಮಡಿಕೇರಿ ಕ್ಷೇತ್ರ ಶಾಸಕರಾಗಿ ಚುನಾಯಿತರಾದ ಅಲ್ಪಾವಧಿಯಲ್ಲಿ ಶಾಸಕ ಡಾ.ಮಂಥರ್ ಗೌಡ ಎಲ್ಲರನ್ನೂ ಚಕಿತಗೊಳಿಸುವ ರೀತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು‌ ಅನುಷ್ಠಾನಗೊಳಿಸುತ್ತಿರುವುದು ಹೆಮ್ಮೆಯ‌ ಸಂಗತಿ ಎಂದು ಗ್ಯಾರೆಂಟಿ ಯೋಜನೆಗಳ‌ ಅನುಷ್ಠಾನ ಸಮಿತಿ‌ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಆಡಳಿತ ಅವಧಿಯಲ್ಲಿ ಜಾರಿಗೊಂಡು ಪೂರ್ಣಗೊಳ್ಳದ ಕಾಮಗಾರಿಗಳನ್ಬು ಪೂರ್ಣಗೊಳಿಸಿ ಚಾಲನೆಗೊಳಿಸುವಲ್ಲಿ ಮಂಥರ್ ಗೌಡ ಮುಂದಾಗಿದ್ದಾರೆ. ಹೆಚ್ಚುವರಿ ಅನುದಾನಗಳ, ವಿಶೇಷ ಪ್ಯಾಕೆಜ್ ಗಳ ಮೂಲಕ ಸೇತುವೆ, ರಸ್ತೆ, ಕುಡಿವ ನೀರಿನ ಪೂರೈಕೆ, ಸಾರಿಗೆ ಡಿಪೋ, ಕೊಯಿಮ್ಸ್ ಗೆ ಎಂಆರ್.ಐ ಸ್ಲಾನಿಂಗ್ ಯಂತ್ರ ಸೇರಿದಂತೆ ಶಿಕ್ಷಣ ಕ್ಷೇತ್ರ ಮತ್ತಿತರ ಅಭಿವೃದ್ದಿ ಯೋಜನೆಗಳಿಗೆ‌ ಅನುದಾನ ಒದಗಿಸಿದ್ದಾರೆ. ರಸ್ತೆ‌ ಕಾಮಗಾರಿಗಳಿಗೆ ಗ್ರಾಪಂ ವ್ಯಾಪ್ತಿ ಗೆ 1 ಕೋಟಿ ರೂಗಳನ್ನು‌ ಒದಗಿಸುತ್ತಿರುವುದು ಇಲ್ಲಿನ ವಿಶೇಷ ಎಂದ ಅವರು, ಕ್ಷೇತ್ರದ ಬಗ್ಗೆ ಅನುಭವ ಹೊಂದಲು ವರ್ಷಗಳ ಅಗತ್ಯವಿದೆ ಎಂದು ಟೀಕೆ ಮಾಡುತ್ತಿದ್ದವರಿಗೆ ವರ್ಷ ಪೂರೈಸುವ ಮೊದಲೇ ತನ್ನ ಕೆಲಸದ ಮೂಲಕ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು. ಆರಂಭದ ವರ್ಷ ಅಳಿದುಳಿದ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ವರ್ಷಗಳಲ್ಲಿ ತಮ್ಮದೇ ಆದ ಹೊಸ ಚಿಂತನೆಗಳ ಯೋಜನೆಗಳನ್ನು ಅನುಷ್ಠಾನಕ್ಕೆ ಮುಂದಾಗಲಿದ್ದೇವೆ. ಈ ಅವಧಿಯೊಳಗೆ ಮಡಿಕೇರಿಯನ್ನು ಬೇಡಿಕೆಗಳಿಲ್ಲದ ಕ್ಷೇತ್ರವಾಗಿಸುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮಾತನಾಡಿ, ವಿವಿಧ ಇಲಾಖೆಗಳ ಮೂಲಕ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಮಾಹಿತಿ ಒದಗಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ಕುಶಾಲನಗರ ಪುರಸಭೆ ವ್ಯಾಪ್ತಿಗೆ ಶಾಸಕರ ನಿಧಿ, ಮೈನಾರಿಟಿ‌ ಫಂಡ್, ಎಸ್.ಎಫ್.ಸಿ ಒಳಗೊಂಡಂತೆ ಈಗಾಗಲೆ 8.5 ಕೋಟಿ ಅನುದಾನ ಒದಗಿಸಲಾಗಿದೆ. ಈ ಹಿಂದಿನ ಪ್ರಸ್ತಾವನೆಯಂತೆ ನಗರೋತ್ಹಾನಕ್ಕೆ 5 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಒಟ್ಟಾರೆಯಾಗಿ ಪುರಸಭೆ ವ್ಯಾಪ್ತಿಗೆ 13.5 ಕೋಟಿ ಅನುದಾನ ಲಭಿಸಿದ್ದು ಗುಂಡುರಾವ್ ಬಡಾವಣೆಯಲ್ಲಿ ಮೂರು ಎಕರೆಯಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ರೂಪಿಸಲು 9 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ನಾಮನಿರ್ದೇಶಿತ ಸದಸ್ಯ ಎಂ.ಎಂ.ಪ್ರಕಾಶ್, ಶಿವಶಂಕರ್, ಪ್ರಮುಖರಾದ ನಂಗಾರು ಜಗ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!