ಕುಶಾಲನಗರ, ಮಾ.10: ಜೂನಿಯರ್ ಛೇಂಬರ್ ಆಫ್ ಇಂಟರ್ ನ್ಯಾಷನಲ್ ( ಜೆಸಿಐ ), ಇಂಡಿಯಾದ ಸುಂಟಿಕೊಪ್ಪ ಜೆಸಿಐ ವತಿಯಿಂದ ಸೋಮವಾರಪೇಟೆ ಪೊಲೀಸ್ ಉಪ ವಿಭಾಗದ ಸಹಕಾರದೊಂದಿಗೆ ಭಾನುವಾರ ( ಮಾ.10 ರಂದು) ಉತ್ತರ ಕೊಡಗಿನ ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗೆ ಒತ್ತಡ ನಿರ್ವಹಣೆ ಮತ್ತು ಸಮಯ ಪಾಲನೆ ಕುರಿತು ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಸೋಮವಾರಪೇಟೆ ಪೊಲೀಸ್ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ( ಡಿವೈಎಸ್ಪಿ) ಆರ್.ವಿ.ಗಂಗಾಧರಪ್ಪ ಮಾತನಾಡಿ, ಸಮಾಜದಲ್ಲಿ ಪೊಲೀಸರು
ಕಾನೂನು ಪರಿಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಿ ಇಲಾಖೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಪ್ರತಿನಿತ್ಯ ಸಾಕಷ್ಟು ಒತ್ತಡ ಹಾಗೂ ಮನಸ್ಸಿನ ದುಗುಡಗಳಲ್ಲಿ
ಕಾರ್ಯನಿರ್ವಹಿಸುವ
ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಒತ್ತಡ ನಿರ್ವಹಣೆ ಮೂಲಕ
ಒತ್ತಡದಿಂದ ಹೊರಬಂದು ಮನಸ್ಸಿಗೆ ನೆಮ್ಮದಿ ಪಡೆಯುವ ಮೂಲಕ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ಸದಾ ಜಂಜಾಟ ಮತ್ತು ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರಿಗೆ ಮಾನಸಿಕ ನೆಮ್ಮದಿ ಮತ್ತು ವಿಶ್ರಾಂತಿ ಅವಶ್ಯಕತೆ ಇದೆ ಎಂದು ಗಂಗಾಧರಪ್ಪ ಅಭಿಪ್ರಾಯಪಟ್ಟರು.
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಸಹಕಾರದೊಂದಿಗೆ ಪೊಲೀಸರಿಗೆ ಒತ್ತಡ ನಿರ್ವಹಣೆ ಕುರಿತು ಉತ್ತಮ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಪೊಲೀಸರು ದಿನನಿತ್ಯದ ಜಂಜಾಟಗಳೊಂದಿಗೆ ಹೊರಬಂದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಕು ಸಾಧ್ಯವಾಗುತ್ತದೆ ಎಂದು ಡಿವೈಎಸ್ಪಿ ಗಂಗಾಧರಪ್ಪ ಹೇಳಿದರು.
ಜೆಸಿಐ ಸಂಸ್ಥೆಯ ವಲಯ- 14 ರ ವಲಯಾಧ್ಯಕ್ಷೆ ಆಶಾ ಜೈನ್ ಮಾತನಾಡಿ, ಇಂತಹ ತರಬೇತಿಗಳು ಪೊಲೀಸರು ತಮ್ಮ ಕರ್ತವ್ಯದಲ್ಲಿ ಕಾರ್ಯಕ್ಷಮತೆ ಹಾಗೂ ವೃತ್ತಿಪರತೆ
ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಸಮಾಜದ ಹಾಗೂ ಜನರ ರಕ್ಷಣೆಗಾಗಿ ಸದಾ ತುಡಿತಗಳೊಂದಿಗೆ ಕಾರ್ಯ ನಿರ್ವಹಿಸುವ ಪೊಲೀಸರ ಸೇವೆಯು ಅನನ್ಯವಾದುದು.
ಸದಾ ಜಂಜಾಟ ಮತ್ತು ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರಿಗೆ
ವಿಶ್ರಾಂತಿ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಇಂತಹ ತರಬೇತಿಯಿಂದ ಪೊಲೀಸರು ಮನಸ್ಸಿಗೆ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದರು.
ಜೆಸಿಐ ವಲಯದ ಮಾಜಿ ಅಧ್ಯಕ್ಷ ದೇವಿಪ್ರಸಾದ್, ವಲಯದ ಪೂರ್ವ ಉಪಾಧ್ಯಕ್ಷ ಕೆ.ಪ್ರವೀಣ್,
ವಲಯ ಸಂಯೋಜಕ
ಬಿ.ಕೆ. ಸತೀಶ್ ಕುಮಾರ್,ಜೆಸಿಐ ವಲಯದ ಮಾಜಿ ಅಧ್ಯಕ್ಷ ದೇವಿಪ್ರಸಾದ್, ವಲಯದ ಪೂರ್ವ ಉಪಾಧ್ಯಕ್ಷ ಕೆ.ಪ್ರವೀಣ್,
ವಲಯ ಸಂಯೋಜಕ
ಬಿ.ಕೆ. ಸತೀಶ್ ಕುಮಾರ್, ಜೆಸಿಐ ನ ನಿಕಟ ಪೂರ್ವ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕಾರ್ಯದರ್ಶಿ ಮಂಜುನಾಥ್,
ಯೋಜನಾ ನಿರ್ದೇಶಕ ನಿರಂಜನ್,
ಜೇಸೀ ಸದಸ್ಯರಾದ ಡೆನಿಸ್ ಡಿ’ಸೋಜ, ಜಾಯ್ದ್ ಅಹ್ಮದ್, ಎಸ್. ಮುರುಗೇಶ್, ಫೆಲ್ಸಿ ಡೆನಿಸ್, ಜಿ.ಬಿ.ಹರೀಶ್, ಇತರರು ಇದ್ದರು.
ಜೆಸಿಐ ನ ನಿಕಟ ಪೂರ್ವ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕಾರ್ಯದರ್ಶಿ ಮಂಜುನಾಥ್,
ಯೋಜನಾ ನಿರ್ದೇಶಕ ಎಚ್.ಆರ್.
ನಿರಂಜನ್,
ಜೇಸೀ ಸದಸ್ಯರಾದ ಡೆನಿಸ್ ಡಿ’ಸೋಜ, ಜಾಯ್ದ್ ಅಹ್ಮದ್, ಮುರುಗೇಶ್, ಫೆಲ್ಸಿ ಡೆನಿಸ್, ಜಿ.ಬಿ.ಹರೀಶ್, ಇತರರು ಇದ್ದರು.
ತರಬೇತಿ ಕಾರ್ಯಾಗಾರದಲ್ಲಿ ಇನ್ಸ್ ಪೆಕ್ಟರ್ ಗಳಾದ
ರಾಜೇಶ್ ಕೊಟ್ಯಾನ್ , ವಸಂತಕುಮಾರ್, ಪಿಎಸ್ ಐ ಗಳಾದ ಎಂ.ಸಿ.ಶ್ರೀಧರ್, ಮೋಹನ್ ರಾಜ್, ರವಿಶಂಕರ್, ಎಚ್. ಮಂಜುಳಾ, ಕಾಶೀನಾಥ್ ಬಗಲಿ, ಲೋಹಿತ್, ರಮೇಶ್ ಸೇರಿದಂತೆ ಎ ಎಸ್ ಐ ಗಳು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
*ಸನ್ಮಾನ* : ಇದೇ ವೇಳೆಯಲ್ಲಿ ಸುಂಟಿಕೊಪ್ಪ ಜೆಸಿಐ ವತಿಯಿಂದ
ರಾಷ್ಟ್ರೀಯ ಜೆಸಿಐ ಸಂಸ್ಥೆಯ ಪೂರ್ವಾಧ್ಯಕ್ಷ ಟಿ.ವಿ.ಎನ್.ಮೂರ್ತಿ, ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಜೆಸಿಐ ವಲಯಾಧ್ಯಕ್ಷೆ ಆಶಾಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Back to top button
error: Content is protected !!