ಟ್ರೆಂಡಿಂಗ್

ಆರ್.ಎಂ.ಸಿ.ಯಿಂದ ಹಳೆ ಮಾರುಕಟ್ಟೆಗೆ ಸಂತೆ ಸ್ಥಳಾಂತರಕ್ಕೆ ಒತ್ತಾಯ

ಕುಶಾಲನಗರ, ಫೆ 28: ಕುಶಾಲನಗರದಲ್ಲಿ ಈ‌ ಹಿಂದೆ ನಡೆಯುತ್ತಿದ್ದ ಮಾರುಕಟ್ಟೆಯಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಹಳೆ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಜಮಾಯಿಸಿದ ಸಂಘದ ಸದಸ್ಯರುಗಳು ಈಗಿರುವ ಆರ್.ಎಂ.ಸಿ ಯಿಂದ ಹಳೆ ಮಾರುಕಟ್ಟೆಗೆ ಸಂತೆಯನ್ನು ಸ್ಥಳಾಂತರಿಸಬೇಕಿದೆ ಎಂದು ಆಗ್ರಹಿಸಿದರು.

ಈ ಹಿಂದೆ ಇದ್ದ ಸಂತೆ ಮಾರುಕಟ್ಟೆಯಿಂದ ದೊರೆಯುತ್ತಿದ್ದ ಲಕ್ಷಾಂತರ ರೂಗಳ‌ ಆದಾಯ ಪುರಸಭೆಗೆ ತಪ್ಪಿದೆ. ಪ್ರಸಕ್ತ ಸಂತೆ ನಡೆಯುತ್ತಿರುವ ಆರ್.ಎಂ.ಸಿ.ಪ್ರಾಂಗಣ ರೈತರಿಗಾಗಿ ಇದ್ದು, ವ್ಯಾಪಾರಿಗಳ ಅನುಕೂಲಕ್ಕೆ ಹಳೆ ಮಾರುಕಟ್ಟೆಗೆ ಸಂತೆ ಸ್ಥಳಾಂತರಗೊಳಿಸಬೇಕಿದೆ. ಹೆದ್ದಾರಿ ಬದಿಯಲ್ಲಿರುವ ಆರ್.ಎಂ.ಸಿಯಲ್ಲಿ ವಾರದ ಸಂತೆ ದಿನ ಹೆಚ್ಚಿನ ವಾಹನ ದಟ್ಟಣೆಯಿಂದ ತೀವ್ರ ಅನಾನುಕೂಲ ಸೃಷ್ಠಿಯಾಗುತ್ತಿದೆ. ಇದರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಇದೆಲ್ಲವನ್ನು ಪರಿಗಣಿಸಿ ಸಂತೆ ಸ್ಥಳಾಂತರಕ್ಕೆ ಕ್ರಮವಹಿಸಬೇಕಿದೆ ಎಂದು ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಇಕ್ಬಾಲ್ ಮತ್ತು ಡಿಎಸ್ಎಸ್ ಸಂಚಾಲಕ‌ ಕೆ.ಬಿ.ರಾಜು ಒತ್ತಾಯಿಸಿದರು.

ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ‌ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾರುಕಟ್ಟೆ ಸಂಘದ ಕಾರ್ಯದರ್ಶಿ ಮಹೇಶ್, ಖಜಾಂಚಿ ವಿ.ಎಚ್.ಪ್ರಶಾಂತ್, ಡಿ.ಸಿ.ಮೂರ್ತಿ, ವಿ.ಎನ್.ಪ್ರಸಾದ್, ಡಿ.ಆರ್.ಪರಮೇಶ್, ಗಣೇಶ್, ಡಿಎಸ್ ಎಸ್ ಪ್ರಮುಖರಾದ ಮಂಜುನಾಥ್, ಮಹೇಶ್ ಮತ್ತಿತರರು ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!