ಕ್ರೈಂ

ಅತ್ಯಾಚಾರಕೊಳ್ಳಗಾದ ಅಪ್ರಾಪ್ತೆ ಆತ್ಮಹತ್ಯೆ: ಅರಣ್ಯ ಇಲಾಖೆ ಸಿಬ್ಬಂದಿ ಬಂಧನ

ಕೊಡಗು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ

ಕುಶಾಲನಗರ, ಫೆ 16:ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಬಾಡಗ ಗ್ರಾಮದ ಕೋಳೆದ ವಾರಿಜ ದೇವಯ್ಯ ರವರ ತೋಟದ ಲೈನುಮನೆಯಲ್ಲಿ ವಾಸವಿದ್ದ 17 ವರ್ಷದ ಅಪ್ರಾಪ್ತೆಯೊಬ್ಬಳು ದಿನಾಂಕ: 12-02-2024 ರಂದು ಹೊಟ್ಟೆನೋವಿನ ಕಾರಣದಿಂದ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿರುವ ಕುರಿತು ವರದಿಯಾಗಿದ್ದು, ಹಾಗೂ ಅರಣ್ಯ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಎಂಬಾತನು ದಿನಾಂಕ: 02-02-2024 ರಂದು ಬೊಳ್ಳೆರ ಗೇಟ್ ಎಂಬ ಸ್ಥಳಕ್ಕೆ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವುದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಹಾಗೂ ಆತ್ಮಹತ್ಯೆಗೆ ಕಾರಣನಾದ ಶ್ರೀಕಾಂತ್ ಎಂಬುವವನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸ್ವೀಕರಿಸಿದ್ದು, ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಘಟನೆ ಸ್ಥಳಕ್ಕೆ ಕುಟ್ಟಿ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಿಯನ್ನು ಪತ್ತೆ ಹಚ್ಚಲು  ಆರ್.ಮೋಹನ್‌ಕುಮಾರ್, ಡಿಎಸ್‌ಪಿ, ವಿರಾಜಪೇಟೆ ಉಪ ವಿಭಾಗ, ಹಾಗೂ  ಇರ್ಶಾದ್.ಸಿ ಪಿಎಸ್‌ಐ, ಶುಟ್ಟ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿ: 15-02-2024 ರಂದು ಕೆ.ಬಾಡಗ ಗ್ರಾಮ ನಾಣಚ್ಚಿ ನಿವಾಸಿ ಶ್ರೀಕಾಂತ್, (31 ವರ್ಷ) ಎಂಬುವವನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರೆದಿರುತ್ತದೆ. ತನಿಖೆಯಲ್ಲಿ ಯಾವುದೇ ಲೋಪ ದೋಷವಾಗದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!