ಕುಶಾಲನಗರ, ಫೆ 08:
ರವರಿಂದ
ಕೆ.ಜಿ.ಮನು
ಕುಶಾಲನಗರ
ಕೊಡಗು ಜಿಲ್ಲೆ
ರವರಿಗೆ
ಮಾನ್ಯ ಸಿದ್ದರಾಮಯ್ಯನವರಿಗೆ,
ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ,
ವಿಧಾನಸೌಧ,
ಬೆಂಗಳೂರು
ಮಾನ್ಯರೇ,
ವಿಷಯ: ಮದ್ಯಪಾನದಿಂದ ಬರುವ ತೆರಿಗೆಯನ್ನು ಮದ್ಯಪಾನ ಪ್ರಿಯರಿಗೆ ಈ ಬಾರಿಯ ಬಜೆಟ್ ನಲ್ಲಿ ಮೀಸಲಿಡಬೇಕಾಗಿ ಮನವಿ.
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮದ್ಯಪಾನ ಮಾರಾಟದಿಂದ ಸಾಕಷ್ಟು ತೆರಿಗೆ ಸರ್ಕಾರದ ಖಜಾನೆಗೆ ಸಿಗುತಿದ್ದು, ಸರ್ಕಾರದ ಬಹುತೇಕ ಯೋಜನೆಗಳು ಮದ್ಯಪಾನ ಪ್ರಿಯರ ಹಣದಿಂದಲೆ ಬರಿಸುತಿದ್ದೀರ, ಅದರೆ ಗಾಯದ ಮೇಲೆ ಬರೆ ಎಳೆದಂತೆ ಆಗಾಗ ಮದ್ಯಪಾನದ ಬೆಲೆ ಏರಿಸುವ ಮೂಲಕ ಮದ್ಯಪಾನ ಪ್ರಿಯರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತಿದ್ದೀರಾ.
ಮದ್ಯಪಾನ ಪ್ರಿಯರಿಂದ ರಾಜ್ಯ ಸರ್ಕಾರದ ಖಜಾನೆಗೆ ಅತಿ ಹೆಚ್ಚು ಅಂದರೆ ವರ್ಷಕ್ಕೆ ಸರಿ ಸುಮಾರು 36000 ಕೋಟಿ ಕಂದಾಯದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಲ್ಲಿಕೆಯಾಗುತಿದೆ.
*ನಮ್ಮ ತೆರಿಗೆ ನಮ್ಮ ಹಕ್ಕು* ಈ ಘೋಷಣೆಯಂತೆ ಮದ್ಯಪಾನದಿಂದ ಬರುವ ತೆರಿಗೆ ಹಣ ಶೇಕಡ 80% ರಷ್ಟು ಹಣವನ್ನು ಮದ್ಯಪ್ರಿಯರಿಗೆ ಬಜೆಟ್ ನಲ್ಲಿ ಮೀಸಲಿಟ್ಟು ಮದ್ಯಪ್ರಿಯರ ಸಂಕಷ್ಟಗಳಿಗೆ ಬಳಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕಾಗಿ ಈ ಮೂಲಕ ಕೋರಿಕೆ
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
(ಕೆ.ಜಿ.ಮನು),
ಕುಶಾಲನಗರ
Back to top button
error: Content is protected !!