ಕುಶಾಲನಗರ ಫೆ. 6: ಹಾಸನ ಹೆದ್ದಾರಿಯ ಹೆಬ್ಬಾಲೆ ಮುಖ್ಯ ರಸ್ತೆಯ ಬದಿಯಲ್ಲಿ ಭೈರಪ್ಪಗುಡಿ ಗ್ರಾಮದಲ್ಲಿ ಶುಂಠಿ ಕೆಲಸಕ್ಕೆ ಬಂದ ಮಂಗಳೂರು ಮೂಲದ ವ್ಯಕ್ತಿಯ ಮೃತ ದೇಹ ಪತ್ತೆಯಾದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ತೊಕೂರು ಗ್ರಾಮದ ವಿಕ್ಟರ್ ಫೆಲಿಕ್ಸ್ ಡಿಸೋಜ (68) ಮೃತ ದುರ್ದೈವಿ. ಹೆಬ್ಬಾಲೆ ಮುಖ್ಯ ರಸ್ತೆಯಲ್ಲಿ ಕಳೆದ ರಾತ್ರಿ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಪರಿಣಾಮವಾಗಿ ಮೃತ ಪಟ್ಟಿರಬಹುದೆಂದು ತಿಳಿದುಬಂದಿದೆ.
ಕುಶಾಲನಗರದ ಸಂಚಾರಿ ಪೋಲೀಸ್ ಠಾಣೆಯ ಅಧಿಕಾರಿಗಳ ತಂಡ ಸ್ಧಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮೃತ ದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.
Back to top button
error: Content is protected !!