ಕುಶಾಲನಗರ, ಫೆ 05: ಬೈಕ್ ಸರ್ವೀಸ್ ಗೆ ಬಂದಿದ್ದ ಗ್ರಾಹಕ ಮತ್ತು ಶೋರೂಂ ಮಾಲೀಕನ ನಡುವೆ ನಡೆದ ಗಲಾಟೆಯಲ್ಲಿ ಶೋರೂಂ ಮಾಲೀಕನಿಂದ ಇರಿತಕ್ಕೆ ಒಳಗಾಗಿದ್ದ ಯುವಕ ಮೃತಪಟ್ಟಿದ್ದಾನೆ.
ಮಡಿಕೇರಿ ಗಣಪತಿ ಬೀದಿ ನಿವಾಸಿ ಶೌಕತ್ ಎಂಬವರ ಪುತ್ರ ವೆಲ್ಡರ್ ಸದೀದ್ (23) ಮೃತಪಟ್ಟವನು.
ಕುಶಾಲನಗರ ಮೈಸೂರು ರಸ್ತೆಯಲ್ಲಿರುವ ಕೊಡಗನ ಮೋಟರ್ಸ್ ಮಾಲೀಕ ಶ್ರೀನಿಧಿ ಹಾಗೂ ಮಡಿಕೇರಿ ನಿವಾಸಿ ಸದೀದ್ ಎಂಬಾತನ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು ಶ್ರೀನಿಧಿ ಸದೀದ್ ಎದೆಗೆ ಚೂಪಾದ ಆಯುಧದಿಂದ ಇರಿದಿದ್ದ ಎನ್ನಲಾಗಿದೆ. ಗಂಭೀರ ಗಾಯಗೊಂಡ ಸದೀದ್ ನನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Back to top button
error: Content is protected !!