ಕುಶಾಲನಗರ, ಸೆ 29: ಅಮೃತ ಗ್ರಾಮದ ಯೋಜನೆಗೆ ಆಯ್ಕೆಯಾದ ಕೂಡುಮಂಗಳೂರು ಗ್ರಾಪಂ, ಯೋಜನೆಯಡಿ ದೊರೆತ ಅನುದಾನದಲ್ಲಿ ಗ್ರಾಪಂ ವ್ಯಾಪ್ತಿಯ 10 ಅಂಗನವಾಡಿ ಕೇಂದ್ರಗಳಿಗೆ ಆಟಿಕೆ ವಿತರಣೆ ಮಾಡಲಾಯಿತು.
ತಲಾ 10 ಸಾವಿರ ಮೌಲ್ಯದ ಆಟಿಕೆ ಸಾಮಗ್ರಿಗಳನ್ನು ಗ್ರಾಪಂ ಸಭಾಂಗಣದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ವಿತರಣೆ ಮಾಡಲಾಯಿತು.
ಈ ಸಂದರ್ಭ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಉಪಾಧ್ಯಕ್ಷೆ ಶಶಿಕಲಾ, ಪಿಡಿಒ ಸಂತೋಷ್ ಸೇರಿದಂತೆ ಸದಸ್ಯರು ಇದ್ದರು.
Back to top button
error: Content is protected !!