ಕುಶಾಲನಗರ, ಜೂ 10: ಗೊಂದಿಬಸವನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟು ವಾಹನ ಸಂಚಾರಕ್ಕೆ ತುಂಬa ತೊಂದರೆಯಾಗಿತ್ತು. ಇದೀಗ ರೂ.1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ರಸ್ತೆಯನ್ನು ಮಂಗಳವಾರ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.
ದಶಕಗಳಿಂದ ಗೊಂದಿಬಸವನಹಳ್ಳಿ ರಸ್ತೆ ಗುಂಡಿಮಯವಾಗಿತ್ತು.ಗ್ರಾಮಸ್ಥರ ಕೋರಿಕೆ ಮೇರೆಗೆ ಶಾಸಕರ ವಿಶೇಷ ಪ್ರಯತ್ನದಿಂದ ರೂ.1 ಕೋಟಿ ಅನುದಾನ ತಂದು ದಶಕಗಳ ಕನಸು ನನಸು ಮಾಡಿ ಶಾಸಕ ಡಾ.ಮಂತರ್ ಗೌಡ ಅವರಿಗೆ ಗ್ರಾಮದ ಪುರಸಭೆ ಸದಸ್ಯರಾದ ಜಗದೀಶ್ ಹಾಗೂ ಎಂ.ಎಂ.ಪ್ರಕಾಶ್ ಅವರ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಿದರು.
ಸಾರ್ವಜನಿಕರ ಉಪಯೋಗಕ್ಕೆ ರಸ್ತೆ ಮುಕ್ತಗೊಳಿಸಿ ಮಾತನಾಡಿದ ಶಾಸಕರು, ಗೊಂದಿಬಸವನಹಳ್ಳಿ ಗ್ರಾಮದವರೆಗೆ ಈಗ ರಸ್ತೆ ಅಭಿವೃದ್ಧಿ ಆಗಿದೆ.ಮುಂದಿನ ದಿನಗಳಲ್ಲಿ ಅತ್ತೂರು ಮುಖ್ಯ ರಸ್ತೆಗೆ ಜೋಡಣೆ ಮಾಡಿ ಸಂಪೂರ್ಣ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ.ಈ ರಸ್ತೆ ಅಭಿವೃದ್ಧಿ ಯಿಂದ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ. ರೂ.7.5 ಕೋಟಿ ವೆಚ್ಚದಲ್ಲಿ ಪುರಸಭೆ ಕಟ್ಟಡ ನಿರ್ಮಾಣಗೊಂಡಿದ್ದು,ಜೂ.11 ರಂದು ಬುಧವಾರ ಉದ್ಘಾಟನೆಗೊಳ್ಳಲಿದೆ. ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟನೆ ನೆರವೇರಿಸುವರು ಎಂದರು.
ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿಚಂದ್ರಕಲಾ, ಸದಸ್ಯ ಮಂಜುನಾಥ್ ಗುಂಡೂರಾವ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ್,ಜಗದೀಶ್,ಶಿವಕುಮಾರ್, ಮುಖಂಡರಾದ ಶಶಿಭೀಮಯ್ಯ,ರಂಜನ್ ಹೆಬ್ಬಾಲೆ, ಚಂದ್ರು, ಕೃಷ್ಣಪ್ಪ, ಉಸ್ಮಾನ್ ಗುತ್ತಿಗೆದಾರ ಅಜೀಜ್ ಇತರರು ಇದ್ದರು.
Back to top button
error: Content is protected !!