ಸಾಂಸ್ಕೃತಿಕ

ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನಡೆದ ಶಿವಧಾರೆ ಉತ್ಸವ

ಕುಶಾಲನಗರ, ಜೂ 01: ಜಗತ್ತು ಡಿಜಿಟಲ್‌ ಯುಗದತ್ತ ಮುಖ ಮಾಡಿದಂತೆ ಸಾಂಸ್ಕೃತಿಕ ಲೋಕದಲ್ಲೂ ಹೊಸತನದ ಹೊಳಪು. ಕಲೆ ಎಂಬುದು ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಕಲೆಯ ಮೂಲಕ ಕಲಾ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿಬಾರಿಯೂ ವಿಭಿನ್ನ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ
ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನೃತ್ಯ ಶಾಲೆಯ ಸಭಾಂಗಣದಲ್ಲಿ ಶಿವಧಾರೆ ಉತ್ಸವ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿವಧಾರೆ ನೃತ್ಯ ಶಾಲೆಯ ಸುಮಾರು 20 ವಿದ್ಯಾರ್ಥಿಗಳು ಸೋಲೋ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅದ್ಭುತ ನೃತ್ಯ ಪ್ರದರ್ಶಿಸಿದರು.
ವೆಸ್ಟರ್ನ್, ಹಿಪ್ ಹಾಪ್, ಸೋಲೋ, ಫ್ರೀ ಸ್ಟೈಲ್ ನೃತ್ಯಗಳು ಹೀಗೆ ಮಕ್ಕಳು ಒಂದನ್ನೊಂದು ಮೀರಿಸುವಂತೆ ಪ್ರದರ್ಶನ ನೀಡುವ ಮೂಲಕ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡರು.
ಮಕ್ಕಳ ಅದ್ಬುತ ನೃತ್ಯ ಎಲ್ಲರ ಗಮನ ಸೆಳೆಯಿತು.
ವೈವಿಧ್ಯಮಯ ಉಡುಗೆ ತೊಡುಗೆಗಳು ನೃತ್ಯ ವೈಭವಕ್ಕೆ ಮತ್ತಷ್ಟು ಮೆರುಗು ತುಂಬಿದವು.
ಸಬ್ ಜೂನಿಯರ್ ವಿಭಾಗದಲ್ಲಿ ಜಾಗ್ವಿ ಪ್ರಥಮ, ನಿಹಾರಿಕಾ ದ್ವಿತೀಯ ಹಾಗೂ ಇಶಾನಿ ತೃತೀಯ ಬಹುಮಾನ ಪಡೆದುಕೊಂಡರು.
ಜೂನಿಯರ್ ವಿಭಾಗದಲ್ಲಿ ಆಧ್ಯಾ ಪ್ರಥಮ, ಅನನ್ಯ- ಕಹಾನಿ ದ್ವಿತೀಯ ಹಾಗೂ ಮಹಾನಿ ತೃತೀಯ ಬಹುಮಾನ ಪಡೆದುಕೊಂಡರು.
ಸೀನಿಯರ್ ವಿಭಾಗದಲ್ಲಿ ಹಿತಾ ಗೌಡ ಪ್ರಥಮ, ಪೂರ್ವಿ ಶೆಟ್ಟಿ ದ್ವಿತೀಯ, ದಿಶಾ ಪ್ರಶಾಂತ್ ಹಾಗೂ ರಿಷಾ ಪ್ರಶಾಂತ್ ತೃತೀಯ ಬಹುಮಾನ ಪಡೆದುಕೊಂಡರು.
ಗುಡ್ಡೆಹುಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಉತ್ತಪ್ಪ ಹಾಗೂ ಆರಕ್ಷಕ ಅಧಿಕಾರಿ ಜಯಪ್ರಕಾಶ್ ಮಕ್ಕಳಿಗೆ ಬಹುಮಾನ ವಿತರಿಸಿದರು.
ಶಿವಧಾರೆ ನೃತ್ಯ ಸಂಸ್ಥೆಯ ನೃತ್ಯ ಸಂಯೋಜಕ ಮಾಸ್ಟರ್ ಚೇತನ್ ರವಿ, ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಇದೇ ಸಂದರ್ಭ ನೃತ್ಯ ಸಂಯೋಜಕ ಮಾಸ್ಟರ್ ಚೇತನ್ ರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕುಶಾಲನಗರದ ಮುತ್ತೂಟ್ ಎಂಕ್ರೆಡ್ ಲಿಮಿಟೆಡ್‌ ನ ಬ್ರಾಂಚ್ ಮ್ಯಾನೇಜರ್ ವಿನೋದ್, ಮೆಹೆಕ್ ಚಿಕನ್ ಸ್ಟಾಲ್ ನ ಮಾಲೀಕರಾದ ಇಲ್ಲು, ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕರಾದ ನಯಾಜ್ ಅಹಮ್ಮದ್ ಸೇರಿದಂತೆ ಶಿವಧಾರೆ ನೃತ್ಯ ಸಂಸ್ಥೆಯ ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!