ಕುಶಾಲನಗರ, ಏ 21: ಕುಶಾಲನಗರದ ಬೈಚನಹಳ್ಳಿಯಲ್ಲಿ ನಾಟ್ಯನಿಕೇತನ ಸಂಗೀತ, ನೃತ್ಯ ಶಾಲೆಯ ನೂತನ ತರಗತಿಯ ಶುಭಾರಂಭ ಕಾರ್ಯಕ್ರಮ ನಡೆಯಿತು.
ಅತಿಥಿಗಳಾಗಿ ಪಾಲ್ಗೊಂಡಿದ್ದ
ನೃತ್ಯ ಕಲಾವಿದರುಗಳಾದ ಶಾರದಾ ಉದಯ್, ವಿದ್ವಾನ್. ಬಿ. ಸಿ. ಶಂಕರಯ್ಯ, ವಿದ್ವಾನ್ ದಯಾನಂದ್ ಅವರುಗಳು ಕಾರ್ಯಕ್ರಮ ಉದ್ಘಾಟಿಸಿದರು.
ಗೆಜ್ಜೆ ಪೂಜೆ, ಸರಸ್ವತಿ ಪೂಜೆ ಕಾರ್ಯಕ್ರಮ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ತರಗತಿಗಳಿಗೆ ಚಾಲನೆ ನೀಡಲಾಯಿತು.
ಕರ್ನಾಟಕ ಡಾ. ಗಂಗೂಭಾಯಿ ಹಾನಗಲ್ ಸಂಗೀತಾ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ನಡೆಸುವ ಭರತನಾಟ್ಯ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಗೀತಾಗುರುಪ್ರಸಾದ್ ರವರು ಕಾರ್ಯಕ್ರಮ ನಿರೂಪಿಸಿದರು.
Back to top button
error: Content is protected !!