ಕಾರ್ಯಕ್ರಮ
ಸೀಗೆಹೊಸೂರಿನಲ್ಲಿ ವಾಣಿಜ್ಯ ಮಳಿಗೆ, ಗೋದಾಮು ಕಟ್ಟಡ ಉದ್ಘಾಟನೆ

ಕೂಡಿಗೆ, ಸೆ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸೀಗೆಹೊಸೂರು ಗ್ರಾಮದಲ್ಲಿ ರೂ 29 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಮತ್ತು ಗೋದಾಮು ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿದರು. ಸಾಹಿತಿ ಭಾರದ್ವಾಜ್ ಕೆ ಆನಂದತೀರ್ಥ ಅವರು ಗೊಬ್ಬರ ಮಾರಾಟ ಮಳಿಗೆ ಉದ್ಘಾಟಿಸಿದರು. ಸಂಘದ ಹಿರಿಯ ನಿರ್ದೇಶಕ ಕೆ.ಟಿ.ಅರುಣ್ ಕುಮಾರ್ ಹಾಗೂ ವೃತ್ತಿ ಪರ ನಿರ್ದೇಶಕರಾದ ನಾಗೇಂದ್ರಬಾಬು ಅವರು ಗೋದಾಮು ಉದ್ಘಾಟಿಸಿದರು. ಸಾಹಿತಿ ಭಾರದ್ವಾಜ ಆನಂದತೀರ್ಥ ಮಾತನಾಡಿ, ಅಧಿಕಾರವಧಿಯಲ್ಲಿ ಬರುವ ಆರೋಪ, ತೆಗಳಿಕೆಗಳಿಗೆ ಗಮನ ಹರಿಸದೆ ಸಂಘದ ಅಭಿವೃದ್ದಿಗೆ, ಸದಸ್ಯರಿಗೆ ಅನುಕೂಲ ಒದಗಿಸುವ ಬಗ್ಗೆ ಮಾತ್ರ ಚಿಂತನೆ ಹರಿಸಬೇಕು ಎಂದು ಸಲಹೆ ನೀಡಿದರು.



