ಪ್ರಕಟಣೆ
ವಿಕಾಸ್ ಜನಸೇವಾ ಟ್ರಸ್ಟ್ ನ ಆಶ್ರಮದ ರಮೇಶ್ ನಿಧನ

ಕುಶಾಲನಗರ, ಅ 08: ನಿರ್ಗತಿಕರಿಗೆ ಆಸರೆಯಾಗಿದ್ದ ಸಮಾಜ ಸೇವಕ ರಮೇಶ್ ಕೊನೆಯುಸಿರು. ಭಾನುವಾರ ನಸುಕಿನ 3.30 ಸಮಯದಲ್ಲಿ ಕೊನೆಯುಸಿರು.
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದ ರಮೇಶ್.
ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್.
ಕೊಡಗು ಜಿಲ್ಲೆಯಲ್ಲಿ ವಿಕಾಸ್ ಜನಸೇವಾ ಟ್ರಸ್ಟ್ ನ ಆಶ್ರಮದ ಮೂಲಕ ಕಳೆದ 8 ವರ್ಷಗಳಿಂದ ನೂರಾರು ಅನಾಥರಿಗೆ, ವೃದ್ಧರಿಗೆ, ನಿರ್ಗತಿಕರಿಗೆ ಆಸರೆ ಯಾಗಿದ್ದ ಸಮಾಜ ಸೇವಕ ರಮೇಶ್.
ಪತ್ನಿ ಹಾಗೂ 3 ಹೆಣ್ಣು ಮಕ್ಕಳು ಮತ್ತು ತಂದೆ ಹಾಗೂ ಆಶ್ರಮದಲ್ಲಿ ತಾನು ಸಾಕುತ್ತಿದ್ದ 36 ಅನಾಥರನ್ನು ಅಗಲಿದ ಸಮಾಜ ಸೇವಕ ರಮೇಶ್.


