ಕುಶಾಲನಗರ, ಆ 25: ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರಾದ ವಿದ್ಯಾವಂತರಾದ ಜ್ಞಾನಿಗಳು ಮೈಸೂರು ಸಂಸ್ಥಾನದ ರಾಜರು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾರಾಜರಾದ ಶ್ರೀ ಯದುವೀರ್.ಲೋಕಸಭಾ ಸದಸ್ಯರು ಬೂಕರ್ ಪ್ರಶಸ್ತಿಯ ವಿಜಯತೇ ಭಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಸ್ವಾಗತಿಸಿರುವುದು ಕರ್ನಾಟಕ ರಾಜ್ಯ ರೈತ ಸಂಘ (ರಿ)ರೈತ ರಾಜ್ಯಾಧ್ಯಕ್ಷರಾದ ಇಂಗಲಕುಪ್ಪೆ ಕೃಷ್ಣೇಗೌಡರು ಮತ್ತು ರಾಜ್ಯ ಪ್ರಧಾನ ಸಂಚಾಲಕರಾದ ಡಾಕ್ಟರ್.ಅರುಣ್ ಕುಮಾರ್ ಅವರಿಗೆ ಸಂತಸದ ವಿಷಯ.
ಕರ್ನಾಟಕದ ಹಿರಿಮೆಗೆ ಬೂಕರ್ ಪ್ರಶಸ್ತಿಯನ್ನು ತಂದುಕೊಟ್ಟ ಮೊದಲ ಕನ್ನಡದ ದಿಟ್ಟ ಮಹಿಳಾ ಕವಿ ಯಾತ್ರೆ. ಇವರ Hart Lamp ಕೃತಿಗೆ ಇಡೀ ಪ್ರಪಂಚವೇ ಒಪ್ಪಿ ಇವರಿಗೆ ಭೂಕರ್ ಪ್ರಶಸ್ತಿಯನ್ನು ನೀಡಿದೆ. ಇದು ನಮ್ಮೆಲ್ಲರ ಕರ್ನಾಟಕದ ಪ್ರತಿಯೊಬ್ಬ ಪ್ರಜೆಗಳ ಹೆಮ್ಮೆ.
ಆದರೆ ಕೆಲವು ಬಲಪಂಥೀಯ ಚಿಂತನೆ ಹಿಂದೂ ಧರ್ಮದ ದೈವಾಂಶ ನಾವೇ ನಿಜವಾದ ಸ್ಥಾಪಕರು ಹಿಂದೂ ಧರ್ಮ ಧರ್ಮಗಳ ನಡುವೆ ಜಾತಿ ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತುತ್ತಿರುವ ಇವರೇ ಮೊದಲು ನಾಡ ದ್ರೋಹಿಗಳು. ಬೂಕರ್ ಪ್ರಶಸ್ತಿಯ ಬಗ್ಗೆ ಆಳ ಅಗಲ ಗೊತ್ತಿಲ್ಲದ ಅವಿವೇಕಿಗಳಿಗೆ ಅರ್ಥ ಆಗಬೇಕು. ಕೇವಲ ಧರ್ಮಗಳನ್ನು ಇಟ್ಟು ಹೀಯಾಳಿಸುವುದು ಅವರಿಗೆ ಸೋಬೇ ತರುವಂತದ್ದಲ್ಲ. ಇಂಥ ಮಂಡ ವಾದಕರಿಗೆ ಈ ಪ್ರಕೃತಿಯೇ ಬುದ್ಧಿ ಕಲಿಸಬೇಕಾಗಿದೆ.
ಭಾರತ ದೇಶ ವಿವಿಧ ಸಂಸ್ಕೃತಿ ಸಂಪ್ರದಾಯ ಆಚರಣೆ ಕಲೆ ಭಾಷೆ ಎಲ್ಲವನ್ನು ಒಗ್ಗಟ್ಟಾಗಿ ಮುನ್ನೆಡುತ್ತಿದೆ. ಇದೇ ಜಾತ್ಯತೀತ ದೇಶ. ಇಂಥ ಭಾರತ ದೇಶದಲ್ಲಿ ಮನೆಯಿಂದ ಹೊರಬಂದು ಮಹಿಳೆ ಅದರಲ್ಲೂ ಕರ್ನಾಟಕದಿಂದ ಪ್ರಪಂಚದಲ್ಲಿ ಹೆಸರು ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ . ಭಾನು ಮುಸ್ತಾಕರ ಬಗ್ಗೆ ಮಾತನಾಡಬೇಕೆಂದರು ಯೋಗ್ಯತೆ. ಜ್ಞಾನ ತಿಳುವಳಿಕೆ ಬೇಕು. ತಿಳುವಳಿಕೆ ಇಲ್ಲದ ಒಂದೇ ವಿಚಾರವಾಗಿ ಧರ್ಮದ ಧರ್ಮದ ಹೆಸರನ್ನು ಇಟ್ಟುಕೊಂಡು ಮಾತನಾಡುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ
ಎಂದು ಕರ್ನಾಟಕ ರಾಜ್ಯ ರೈತ ಸಂಘ (ರಿ) ರೈತ ಬಣದ ರಾಜ್ಯ ಪ್ರಧಾನ ಸಂಚಾಲಕರಾದ ಅರುಣ್ ಕುಮಾರ್ ಕಿಡಿಕಾರಿದ್ದಾರೆ
Back to top button
error: Content is protected !!