ಕುಶಾಲನಗರ, ಅ 12: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಉಪ ಗ್ರಾಮಗಳ ಸರಕಾರಿ ಕೆರೆ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಸರ್ವೆ ನಡೆಸಿ ಕೆರೆಯ ದಾಖಲೆಗಳನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಲಾಯಿತು.
ಹೆಬ್ಬಾಲೆ ಗ್ರಾಮದ ಹುಲುಸೆ ಗ್ರಾಮದ ಸರ್ವೆ ನಂಬರ್ 2.ರಲ್ಲಿ 38 ಸೆಂಟು, 6ನೇ ಹೊಸಕೋಟೆ ಯ ಸರ್ವೆ ನಂಬರ್ 39 ರಲ್ಲಿ 2.02 ಎಕರೆ, ಹಳೆಗೊಟೆ ಗ್ರಾಮದ ಸರ್ವೆ ನಂಬರ್ 59 ರಲ್ಲಿ 1.66 ಎಕರೆ ಜಾಗಗಳ ದಾಖಲೆಗಳನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್ ಗೆ ನೀಡಲಾಯಿತು.
ಈ ಸಂದರ್ಭ ಕುಶಾಲನಗರ ಕಂದಾಯ ಇಲಾಖೆಯ ಪರಿವೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಫೀರ್ ಮಹಮ್ಮದ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!