ಕುಶಾಲನಗರ, ಫೆ.25: ಕುಶಾಲನಗರ ತಾಲ್ಲೂಕಿನ
ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡ್ಲುಕೊಪ್ಪಲು ಗ್ರಾಮದ ಲೇಟ್ ಸಿದ್ದಪ್ಪಯ್ಯ ಅವರ ಮಗನಾದ ಸಿದ್ದಪ್ಪ ಸೌಂಡ್ಸ್ ಮತ್ತು ಶಾಮಿಯಾನದ ಮಾಲೀಕರಾದ ಎಂ.ಎಸ್.ಸುರೇಶ್ ( 58 )
ಅವರು ಅನಾರೋಗ್ಯ ಕಾರಣದಿಂದ
ಭಾನುವಾರ ರಾತ್ರಿ ಸ್ವಗ್ರಾಮ ಮೂಡ್ಲುಕೊಪ್ಪಲು ಗ್ರಾಮದಲ್ಲಿ ನಿಧನ ಹೊಂದಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಸೋಮವಾರ ಸ್ವಗ್ರಾಮ ಮೂಡ್ಲುಕೊಪ್ಪಲಿನಲ್ಲಿ ನೆರವೇರಿತು.
ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ಸೋಮವಾರ ಸ್ವಗ್ರಾಮ ಮೂಡಲಕೊಪ್ಪಲು ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮೃತರ ಮನೆಗೆ ಭೇಟಿ ನೀಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಜಿಲ್ಲಾ ವೀರಶೈವ ಸಮಾಜದ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!