ಕುಶಾಲನಗರ, ಮಾ 07: ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಯುವಕರು ನೀರು ಪಾಲಾದ ಘಟನೆ ಹಳೆ ಕೂಡಿಗೆ ಬಳಿ ನಡೆದಿದೆ.
ಚಿಕ್ಕತ್ತೂರಿನ ಶ್ರೀನಿವಾಸ್ ಅಲಿಯಾಸ್ ಅಪ್ಪು (23), ಕಣಿವೆಯ ಹಕ್ಕೆ ಸಚಿನ್ (25), ಮುಳ್ಳುಸೋಗೆ ಜನತಾಕಾಲನಿ ವಿನೋದ್ (25) ಮೃತ ದುರ್ದೈವಿಗಳು.
ಐವರು ಸ್ನೇಹಿತರು ನದಿ ಬಳಿ ಕಾರು ನಿಲ್ಲಿಸಿ ಸ್ನಾನಕ್ಕೆ ತೆರಳಿದ ಸಂದರ್ಭ ಓರ್ವ ಆಳವಾದ ಜಾಗದಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ತೆರಳಿದ ಮತ್ತೋರ್ವ ಮುಳುಗುವುದನ್ನು ಕಂಡು ಅವನನ್ನು ರಕ್ಷಿಸಲು ಇನ್ನೊಬ್ಬ ಮುಂದಾದ ಸಂದರ್ಭ ಮೂವರೂ ಕೂಡ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹ ಮೇಲೆತ್ತುವ ಕಾರ್ಯ ನಡೆಯುತ್ತಿದೆ. ಸ್ಬೇಹಿತರೆಲ್ಲರೂ ಕಾರು ಚಾಲಕರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಡಿವೈಎಸ್ಪಿ ಗಂಗಾಧರಪ್ಪ ಭೇಟಿ ನೀಡಿದ್ದಾರೆ.
Back to top button
error: Content is protected !!