ಕುಶಾಲನಗರ, ಅ 11: ನಂ 242ನೇ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ 2023-28ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ಅ.12 ರಂದು ನಡೆಯಲಿದೆ.
ಈ ಹಿಂದಿನ ಸಾಲಿನ ಆಡಳಿತ ಮಂಡಳಿ ಮತ್ತೊಮ್ಮೆ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಉಪಾಧ್ಯಕ್ಷ ಟಿ.ಪಿ.ಹಮೀದ್ ನೇತೃತ್ವದ 13 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಈ ಪೈಕಿ ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದು ಗುರುವಾರ ಉಳಿದ 12 ಮಂದಿ ಆಯ್ಕೆಗೆ ಚುನಾಚಣೆ ನಡೆಯಲಿದೆ.
ಹೇಮಂತ್ ಕುಮಾರ್ ತಂಡದಲ್ಲಿ ಟಿ.ಪಿ.ಹಮೀದ್, ಕೆ.ಜೆ.ಕುಮಾರ್, ಕೃಷ್ಣೇಗೌಡ, ನಾಗರಾಜು, ಕೆ.ವಿ.ಸಣ್ಣಪ್ಪ, ರಾಮಚಂದ್ರ, ಪವಿತ್ರ, ಪಾರ್ವತಮ್ಮ, ಕೆ.ಪಿ.ರಾಜು, ರಮೇಶ್, ಅರುಣ್ ರಾವ್ ಕಣದಲ್ಲಿದ್ದಾರೆ.
Back to top button
error: Content is protected !!