ಪ್ರಕಟಣೆ

ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ: ಶಾಸಕ ರಂಜನ್ ವಿಶ್ವಾಸ

ಕುಶಾಲನಗರ, ಡಿ 07: ಕೊಡಗು ಜಿಲ್ಲೆಗೆ ಎನ್. ಡಿ.ಆರ್.ಎಫ್ ನಿಂದ ರೂ 113 ಕೋಟಿ ರೂ ಪ್ರಕೃತಿ ವಿಕೋಪ ಪರಿಹಾರ ಅನುದಾನ‌ ಬಿಡುಗಡೆಗೊಂಡಿದೆ ಎಂದು‌ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸದಲ್ಲಿ ಪ್ರಥಮ ಎಂಬಂತೆ ಅತ್ಯಧಿಕ‌ ಪರಿಹಾರ ಮೊತ್ತ ಈ ಬಾರಿ ಬಿಡುಗಡೆಯಾಗಿದೆ. 39597 ಮಂದಿ ಫಲಾನುಭವಿ ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ತಿಳಿಸಿದರು.
ಕಳೆದ‌ ಬಾರಿ ಕೂಡ 100 ಕೋಟಿಯಷ್ಟು ಮೊತ್ತ ಒದಗಿಸಲಾಗಿತ್ತು ಎಂದ ರಂಜನ್, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ರೈತಸ್ನೇಹಿ ಎಂಬುದು ಈ‌ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು‌ ಹರ್ಷ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಮೂಲೆಮೂಲೆಗಳಲ್ಲಿ ರಸ್ತೆ ರಿಪೇರಿ ಹಾಗೂ ಹೊಸ ರಸ್ತೆ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಿದ ಅವರು, ಬಿಜೆಪಿ ಸರಕಾರ ಸದಾ ಅಭಿವೃದ್ಧಿ ಪರ ಎಂದರು.
ಈಗಾಗಲೆ ಕುಶಾಲನಗರ ಪಪಂ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದ ಅವರು ಕುಶಾಲನಗರ ತನಕ‌ ರೈಲ್ವೇ ಯೋಜನೆ, ಹಾರಂಗಿಯಲ್ಲಿ ಹೂಳೆತ್ತುವುದು, ಗೇಬಿಯನ್ ವಾಲ್ ನಿರ್ಮಾಣ, ಕುಶಾಲನಗರಕ್ಕೆ ನ್ಯಾಯಾಲಯ, ಮಿನಿ ಏರ್ಪೋರ್ಟ್ ನಿರ್ಮಾಣ, ಹೆದ್ದಾರಿ ಅಭಿವೃದ್ದಿ, ತಾಲೂಕಿಗೆ‌ ಮಿನಿ ವಿಧಾನಸೌಧ, ಕುಶಾಲನಗರದಲ್ಲಿ ಪ್ರವಾಹ ಪರಿಸ್ಥಿತಿಗೆ ಶಾಶ್ವತ ಪರಿಹಾರ, ಆಸ್ಪತ್ರೆ ಮೇಲ್ದರ್ಜೆ, ಹಾರಂಗಿಯಿಂದ ಕುಡಿವ ನೀರಿನ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಸರಕಾರ ಹಮ್ಮಿಕೊಂಡಿದೆ ಎಂದರು.
ವಿಧಾನಸಭಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಕೂಡ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ‌ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಹಾಲಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲದಂತಹ ವಾತಾವರಣವಿದೆ ಎಂದು ತಿಳಿಸಿದರು.
ಈ ಸಂದರ್ಭ ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್, ಸದಸ್ಯ ಅಮೃತ್‌ರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಯುವ‌ಮೋರ್ಚಾದ ಚಂದ್ರಶೇಖರ್, ಮೋಹಿತ್, ಗೌತಮ್, ಮುಖಂಡ ಕುಮಾರಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!