ಸುದ್ದಿಗೋಷ್ಠಿ

ಕುಶಾಲನಗರ ಗೌಡ ಸಮಾಜ ಮತ್ತು ಸಹ ಸಂಘಗಳ ಆಶ್ರಯದಲ್ಲಿ ಹುತ್ತರಿ ಆಚರಣೆ

ಕುಶಾಲನಗರ, ನ 24:
ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಹುತ್ತರಿ ಆಚರಣೆ ಗುಮ್ಮನಕೊಲ್ಲಿಯ ಸಂಘದ ಗದ್ದೆಯಲ್ಲಿ ನಡೆಯಲಿದೆ ಎಂದು‌ ಸಂಘದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ತಿಳಿಸಿದರು.

ಗೌಡ ಸಮಾಜದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು,
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಕುಶಾಲನಗರ ಗೌಡ ಸಮಾಜದ ವತಿಯಿಂದ ಅದ್ದೂರಿಯಾಗಿ ಹುತ್ತರಿ ಹಬ್ಬವನ್ನು ಆಚರಣೆ ಹಮ್ಮಿಕೊಳ್ಳಲಾಗಿದೆ.

ನಮ್ಮ ಸಮಾಜದ ಸಹ ಸಂಘಟನೆಗಳಾದ ಗೌಡ ಯುವಕ ಸಂಘ(ರಿ), ಗೌಡ ಮಹಿಳಾ ಒಕ್ಕೂಟ(ರಿ), ಪದ್ಮಾವತಿ ಗೌಡ ಮಹಿಳಾ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಗೌಡ ನಿವೃತ್ತ ಸೈನಿಕರ ಕೂಟ, ಗೌಡ ಸಾಂಸ್ಕೃತಿಕ ವೇದಿಕೆ, ಗೌಡ ಯೂತ್ ಕ್ಲಬ್. ಸಹಯೋಗದಲ್ಲಿ ಹಬ್ಬದ ಆಚರಣೆ ನಡೆಸುತ್ತಿದ್ದು ದಿನಾಂಕ 25-11-2026 ರಂದು ಸಂಜೆ 5:30 ಗಂಟೆಗೆ ನಮ್ಮ ಸಮಾಜದಲ್ಲಿ ಗೌಡ ಮಹಿಳಾ ಒಕ್ಕೂಟ (ರಿ) ಪದ್ಮಾವತಿ ಗೌಡ ಮಹಿಳಾ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಇವರುಗಳು ವಿವಿಧ ಫಲಹಾರಗಳನ್ನು ತಯಾರಿಸಿ ಹಬ್ಬದ ಆಚರಣೆಗೆ ಬರುವ ಸರ್ವರಿಗೂ ಫಲಹಾರ ನೀಡಲಿದ್ದಾರೆ.

ಗೌಡ ನಿವೃತ್ತ ಸೈನಿಕರ ಕೂಟ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆಯ ಅಚ್ಚು ಕಟ್ಟಿನ ತಯಾರಿಯೊಂದಿಗೆ ಸಂಜೆ 6.30 ಗಂಟೆಗೆ ನಮ್ಮ ಕುಲ ಗುರು ಶ್ರೀ ವೆಂಕಟರಮಣ ಸ್ವಾಮಿಯ ನೆಲ್ಲಕ್ಕಿ ಅಡಿಯಲ್ಲಿ ದೇವರನ್ನು ಪ್ರಾರ್ಥಿಸಿ ನೆರೆಕಟ್ಟುವ ಮುಖಾಂತರ ಹಬ್ಬಕ್ಕೆ ಚಾಲನೆ ಕೊಡಲಾಗುವುದು. ಹಿರಿಯರು ಹಾಗೂ ನಮ್ಮ ಸಂಸ್ಕೃತಿಯ ಮುಖ್ಯಸ್ಥರಾದ ಕುಲ್ಲಚೆಟ್ಟಿ ಕಾಶಿ ಪೂವಯ್ಯ ರವರು ಕದಿರು ಗುತ್ತಿಯನ್ನು ಹೊತ್ತು ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್ ರವರ ಮುಂದಾಳತ್ವದಲ್ಲಿ ಸಮಾಜದ ಎಲ್ಲಾ ಆಡಳಿತ ಮಂಡಳಿಯ ಸಹಕಾರದೊಂದಿಗೆ ಗೌಡ ಸಮಾಜದಿಂದ ಮೆರವಣಿಗೆ ಮುಖಾಂತರ ಗಣಪತಿ ದೇವಸ್ಥಾನಕ್ಕೆ ತೆರಳಿ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ‌ ಬಳಿಕ ಹಿಂತಿರುಗಿ ಗೌಡ ಸಮಾಜದ ಆವರಣಕ್ಕೆ ಮೆರವಣಿಗೆ ಮುಖಾಂತರ ಬಂದು ಅವರವರ ವಾಹನಗಳಲ್ಲಿ ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿರುವ ಗೌಡ ಯುವಕ ಸಂಘದ ಹುತ್ತರಿ ಗದ್ದೆಗೆ ತೆರಳಿ ರಾತ್ರಿ 7.30 ಗಂಟೆಗೆ ಕದಿರು ಕುಯ್ದು ನೆರೆದಿರುವ ಸರ್ವರಿಗೂ ಕದಿರನ್ನು ವಿತರಿಸಲಾಗುವುದು.

ಹುತ್ತರಿ ಹಬ್ಬದ ಆಚರಣೆಗೆ ಬೇಕಾಗಿರುವ ಐದು ಬಗೆಯ ಸೊಪ್ಪುಗಳು ಬಾಳೆಕಂಬ ಹಾಗೂ ತೋರಣಗಳನ್ನು, ಕಟ್ಟಿ ಸಿಡಿಮದ್ದು ಗುಂಡುಗಳನ್ನು ಗೌಡ ಯುವಕ ಸಂಘ ಗೌಡ ಯೂತ್ ಕ್ಲಬ್ ಸದಸ್ಯರು ನೆರವೇರಿಸಲಿದ್ದಾರೆ.

ಕದಿರು ತೆಗೆದ ನಂತರ ಗೌಡ ಸಮಾಜಕ್ಕೆ ಆಗಮಿಸಿ ಕುಲ ಗುರು ವೆಂಕಟರಮಣ ಸ್ವಾಮಿಯ ನೆಲ್ಲಕ್ಕಿ ದೀಪದ ಕಂಬಕ್ಕೆ ಕದಿರು ಕಟ್ಟಿ ಗಣಪತಿ ದೇವಸ್ಥಾನಕ್ಕೆ ತೆರಳಿ ಕದಿರು ಕಟ್ಟಿ ಊರಿನ ಎಲ್ಲಾ ದೇವಾನುದೇವತೆಗಳ ಆಶೀರ್ವಾದದೊಂದಿಗೆ ಹಬ್ಬದ ಆಚರಣೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗೌಡ ಸಮಾಜದ ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಯ್ಯಮುಡಿ ಶ್ರೀವಾಣಿ, ಪದ್ಮಾವತಿ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮರದಾಳು ಭೋಜಮ್ಮ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಪಾಣತ್ತಲೆ ಪುಷ್ಪ, ಗೌಡ ನಿವೃತ್ತ ಸೈನಿಕರ ಕೂಟದ ಅಧ್ಯಕ್ಷ ದೇವಜನ ಚಿಣ್ಣಪ್ಪ, ಗೌಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸೂದನ ಗೋಪಾಲ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!