ಚುನಾವಣೆ
ನಂಜರಾಯಪಟ್ಟಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ. ಕೆ ಲೀಲಾವತಿ ಆಯ್ಕೆ


ಕುಶಾಲನಗರ, ನ 13: ಸಮೀಪದ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ ಕೆ ಲೀಲಾವತಿಯವರು ಅವಿರೋಧವಾಗಿ ಆಯ್ಕೆಯಾದರು ಈ ಸಂದರ್ಭ ಚುನಾವಣೆ ಅಧಿಕಾರಿಯಾಗಿ ಬಿಜಿ ಸಂದೀಪ್ ಅವರು ಹಾಜರಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಬಿ. ಎನ್. ಕಾಶಿ ನಿರ್ದೇಶಕರುಗಳಾದ ಡಿಎಲ್ ಮಹೇಶ್ ಚಂದ್ರ, ಎಸ್ ಎಸ್ ಬಿ ಅನಿತಾ, ಕೆ. ಡಿ. ದಾದಪ್ಪ, ಎಸ್ ಎಸ್ ಕಾರ್ಯಪ್ಪ, ಟಿ ಕೆ ಉದಯಕುಮಾರ್, ಎನ್ ಸಿ ಪಂಚಾಕ್ಷರಿ, ಆರ್ ಕೆ ಚಂದ್ರ ಮುಂತಾದವರು ಹಾಜರಿದ್ದರು.