ಕುಶಾಲನಗರ, ನ 06:
ಕರ್ನಾಟಕ ಸರಕಾರವು ಹಾಲಿನ ಧರದಲ್ಲಿ ಮಾಡಿರುವ ಲೀಟರ್ ಒಂದಕ್ಕೆ 8 ರೂಗಳ ಹೆಚ್ಚಳ ಮತ್ತು ಅದರಲ್ಲಿ ರೂ 7 ನ್ನು ಹಾಲು ಉತ್ಪಾದಿಸುವ ರೈತರಿಗೆ ನೀಡುತ್ತಿರುವುದು ಅತ್ಯಂತ ಸ್ವಾಗತಾರ್ಹ ಕಾರ್ಯವಾಗಿದೆ. ಕಳೆದ ಹಲವು ವರ್ಷಗಳಿಂದ ಹಾಲು ಉತ್ಪಾದಕ ರೈತರಿಗೆ ಸರಕಾರ ಬೆಲೆ ಹೆಚ್ಚಳ ಮಾಡಿರಲಿಲ್ಲ. ಕಳೆದ 5 ವರ್ಷಗಳಲ್ಲಿ ಹಾಲು ಉತ್ಪಾದನಾ ವೆಚ್ಚದಲ್ಲಿ ಭಾರಿ ಹೆಚ್ಚಳವಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದರು. ನಷ್ಟ ಭರಿಸಲಾರದೆ ರೈತರು ಹೈನುಗಾರಿಕೆಯಿಂದ ಹಿಂದೆ ಸರಿದಿದ್ದರು. ಇದರಿಂದಾಗಿ ರಾಜ್ಯದಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಬೆಲೆ ಹೆಚ್ಚಳದಿಂದ ರೈತರು ಮತ್ತೆ ಹೈನುಗಾರಿಕೆಯತ್ತ ಮುಖ ಮಾಡಲಿದ್ದಾರೆ. ಬೆಲೆ ಹೆಚ್ಚಳ ರೈತರ ಹಿತದೃಷ್ಟಿಯಿಂದ ಅವಿವಾರ್ಯವಾಗಿತ್ತು. ಕಳೆದ 5 ವರ್ಷಗಳ ಹಿಂದೆ ರೈತರು ಒಂದು ಟನ್ ಹಸಿ ಜೋಳದ ಮೇವನ್ನು 1800/- ರೂಗಳಿಗೆ ಖರೀದಿಸುತ್ತಿದ್ದರು. ಈಗ ಅದೆ ಒಂದು ಟನ್ ಹಸಿ ಮೇವಿನ ಬೆಲೆ 5000/- ರೂ ದಾಟಿದೆ. ಇದರೊಂದಿಗೆ ಪೀಡ್ಸ್, ಜಾನುವಾರು ಔಷದಿಗಳ ಬೆಲೆ, ಚಿಕಿತ್ಸಾ ವೆಚ್ಚಗಳಲ್ಲಿ ಮತ್ತು ಹಸುಗಳಿಗೆ ನೀಡುವ ಸಪ್ಲಿಮೆಂಟರಿ ಆಹಾರಗಳ ಬೆಲೆಗಳೆಲ್ಲವೂ ಸುಮಾರು 4 ರಿಂದ 5 ಪಟ್ಟು ಹೆಚ್ಚಾಗಿದೆ.
ಆದುದರಿಂದ ರಾಜ್ಯದ ರೈತರ ಆರ್ಥಿಕ ಸಂಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಹಾಲಿನ ಮೇಲಿನ ಬೆಲೆ ಹೆಚ್ಚಳವನ್ನು ರಾಜಕೀಯಕ್ಕಾಗಿ ವಿರೋದಿಸದೆ ರೈತರ ಬೆಂಬಲಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಸರಕಾರದ ಈ ಕ್ರಮವನ್ನು ಬೆಂಬಲಿಸಬೇಕ್ಕಾಗಿ ನಾನೂ ಒರ್ವ ಹಾಲು ಉತ್ಪಾದಕನ್ನಾಗಿ ಒತ್ತಾಯಿಸುತ್ತೇನೆ. ಸರಕಾರದ ಬೆಲೆ ಏರಿಕೆಯನ್ನು ಬೆಂಬಲಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ
ನಾಪಂಡ ಮುತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Back to top button
error: Content is protected !!