ಕಾರ್ಯಕ್ರಮ

ದಿವಂಗತ ಪುನಿತ್ ರಾಜ್‍ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ

ಕುಶಾಲನಗರ, ಅ 29: ದಿವಂಗತ ಪುನಿತ್ ರಾಜ್‍ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕುಶಾಲನಗರ ಜನತಾ ಕಾಲನಿ ಪುನಿತ್ ಅಭಿಮಾನಿ ಬಳಗದಿಂದ ಪುನಿತ್ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪುನಿತ್ ಬೃಹತ್ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ‌ ಪೂಜಿಸಿ ನಮನ‌ ಸಲ್ಲಿಸಲಾಯಿತು. ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಗೀತಾ, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಬಾರವಿ ಕನ್ನಡ‌ ಸಂಘದ ಬಬೀಂದ್ರ ಪ್ರಸಾದ್ ಅವರು ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು.

ಮಧ್ಯಾಹ್ನ 1 ಗಂಟೆಯಿಂದ 5 ಸಾವಿರ ಮಂದಿಗೆ ಧಮ್ ಚಿಕನ್ ಬಿರಿಯಾನಿ ವಿತರಣೆ ನಡೆಸಲಾಯಿತು.
ಈ ಸಂದರ್ಭ
ಅಭಿಮಾನಿ ಬಳಗದ ಅಧ್ಯಕ್ಷ ಸಚಿನ್, ಪ್ರಮುಖರಾದ
ಶಿವರಾಜ್, ಲೋಕೇಶ್, ವೇಣುಕುಮಾರ್, ಮಹೇಶ್, ಕಿಶೋರ್, ರಾಜೀವ್, ಅನಂತ ಲವಕುಮಾರ್, ಸಂತೋಷ್, ಅವಿನಾಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!