ರಾಜಕೀಯ

ಜಿಪಂ ಮೀಸಲಾತಿ ಪ್ರಕಟ: ಕೈತಪ್ಪಿದ ಮೀಸಲಾತಿ: ಹಿರಿಯ ರಾಜಕಾರಣಿ ರಾಜಕೀಯ ನಿವೃತ್ತಿ

ಕುಶಾಲನಗರ, ಅ 09: ಜಿಪಂ, ತಾಪಂ ಕ್ಷೇತ್ರಗಳ ಚುನಾವಣೆ ಗೆ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಕುಶಾಲನಗರದ
ಹಿರಿಯ ರಾಜಕಾರಣಿ ವಿ. ಪಿ. ಶಶಿಧರ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕೂಡಿಗೆ‌ ಕ್ಷೇತ್ರದಿಂದ ಸ್ಪರ್ಧಿಸುವ ತಯಾರಿಯಲ್ಲಿದ್ದ ಶಶಿಧರ್ ಅವರಿಗೆ ಕೂಡಿಗೆ ಸಾಮಾನ್ಯ ‌ಮಹಿಳೆ ಮೀಸಲಾತಿ ಪ್ರಕಟಗೊಂಡಿದ್ದರಿಂದ ಅವಕಾಶ ವಂಚಿತರಾಗಿ ಸಹಜವಾಗಿ ನಿರಾಸೆಗೊಂಡಿದ್ದಾರೆ.
ಹಿತ ಶತ್ರುಗಳು ತನ್ನನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಮುಂದಾಗಿದ್ದಾರೆ.
ಶಾಸಕನಾಗಲೂ ಬಿಡಲಿಲ್ಲ
ಈಗ ಜಿಲ್ಲಾ ಪಂಚಾಯತ್ ಚುನಾವಣೆಗೆ ಕೂಡ ನಿಲ್ಲದಂತೆ ಮಾಡಿದ್ದಾರೆ. ಇದರಿಂದ ರಾಜಕೀಯ ಬೇಡ ಅನ್ನಿಸಿದೆ. ತನ್ನನ್ನು ನಂಬಿದವರ ಜೊತೆ ಸಮಾಜ ಸೇವೆ ಮಾಡುವೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!